Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

ಹೃದಯ ಸ್ಪರ್ಶಿ

Drama Inspirational Others

3.4  

ಹೃದಯ ಸ್ಪರ್ಶಿ

Drama Inspirational Others

ಪ್ರೀತಿ ಎಂದರೇನು?

ಪ್ರೀತಿ ಎಂದರೇನು?

1 min
382


ಪ್ರೀತಿ ಎಂದರೇನೆಂದು

ಆ ಅಳುವ‌ ಕಂದನ ಕೇಳು

ತಾಯಿಯ ಮಮತೆಯ ಸಿಹಿಯನ್ನೇ ಉಂಡಿಲ್ಲ.!


ಪ್ರೀತಿ ಎಂದರೇನೆಂದು

ಆ ಮಗಳ ಕೇಳು

ತಂದೆಯ ಭರವಸೆಯ ಹಸ್ತವೇ ತಲೆ ಮೇಲಿಲ್ಲ.!


ಪ್ರೀತಿ ಎಂದರೇನು ಎಂದು

ಆ ಮಕ್ಕಳ ಕೇಳು

ಹೆತ್ತವರ ಆರೈಕೆಯ ಭಾಗ್ಯವೇ ಪಡೆದುಕೊಂಡಿಲ್ಲ.!


ಪ್ರೀತಿ ಎಂದರೇನೆಂದು

ಆ ತಂಗಿಯ ಕೇಳು

ಅಣ್ಣನ ಕಾಳಜಿಯ ಸವಿಯನ್ನೇ ಸವಿದಿಲ್ಲ.!


ಪ್ರೀತಿ ಎಂದರೇನೆಂದು

ಆ ಅಕ್ಕನ ಕೇಳು

ತಮ್ಮನ ಕೋಪದ ಪರಿಯನ್ನೇ ಕಂಡಿಲ್ಲ.!


ಪ್ರೀತಿ ಎಂದರೇನೆಂದು

ಆ ಶಿಷ್ಯನ ಕೇಳು

ಗುರುವಿನ ಆಶೀರ್ವಾದವೇ ದೊರೆತಿಲ್ಲ.!


ಪ್ರೀತಿ ಎಂದರೇನೆಂದು

ಆ ಕರುವಿನಲ್ಲಿ ಕೇಳು

ತಾಯಿ ಹಸುವಿನ ಮೊಲೆ ಹಾಲೇ ಸವಿದಿಲ್ಲ.!


ಪ್ರೀತಿ ಎಂದರೇನೆಂದು

ಆ ತಾಯಿಯ ಕೇಳು

ತನ್ನ ಕರುಳ ಕುಡಿಯನ್ನೇ ಹಡೆಯಲಾಗಿಲ್ಲ.!


ಪ್ರೀತಿ ಎಂದರೇನೆಂದು

ಆ ಭೂರಮೆಯ ಕೇಳು

ಬಾನಿನ ಸಾಮೀಪ್ಯವನ್ನು ಸೇರಲಾಗಿಲ್ಲ.!


ಪ್ರೀತಿ ಎಂದರೇನೆಂದು

ಆ ದುಂಬಿಯ ಕೇಳು

ಹೂವಿನ ಸುಗಂಧವನ್ನೇ ಹೀರಿಲ್ಲ.!


ಪ್ರೀತಿ ಎಂದರೇನೆಂದು

ಆ ಸೂರ್ಯನ ಕೇಳು

ಕಣ್ಣಾಮುಚ್ಚಾಲೆ ಆಡುವ ಚಂದ್ರಮನನ್ನೇ ನೋಡಲಾಗಿಲ್ಲ.!


ಪ್ರೀತಿ ಎಂದರೇನೆಂದು

ಆ ಹೂವನ್ನು ಕೇಳು

ತನ್ನ ಸೌಂದರ್ಯದಿ ಯಾರನ್ನೂ ಸೆಳೆಯಲಾಗಿಲ್ಲ.!



Rate this content
Log in

Similar kannada poem from Drama