STORYMIRROR

Surabhi Latha

Abstract Classics Crime

4  

Surabhi Latha

Abstract Classics Crime

ಹೆಣ್ಣು

ಹೆಣ್ಣು

1 min
500

ತಿಂಗಳಿಗೊಂದು ವ್ರತ ,ವಾರಕ್ಕೊಂದು ಪೂಜೆ,ಭಜನೆ, ಹಾಡುಗಳು ತರಾವರಿ 

ಕಣ್ಣೆದುರು ಬರದ ದೇವನಿಗೆ ಭಕ್ತಿ 

ಉಣಿಸಿದ ಹೆತ್ತ ತಾಯಿಗೆ ನಿರಾಸಕ್ತಿ

ಮಮತೆಯ ಕಡೆಗಣಿಸುವ ಕಟುಕ 

ಯಾರ ಮೆಚ್ಚಿಸಲು ಈ ಪರಿ ನಾಟಕ 


ದೇವನಿಗೆ ನಾಮಗಳು ಹಲವು 

ದೇವಾಲಯಕೆ ಬೇಡಲು ಹೊಗುವೆವು 

ಇಚ್ಛೆ ಗಳ ಪೂರೈಸಿದ ಪಿತೃವಿಗೆ ನೋವು ಹೆಜ್ಜೆ ಹೆಜ್ಜೆಗೂ ರುಚಿಸುವೆ ಬೇವು 

ವೃದ್ಯಾಪ್ಯ ವೆಂತದಿದೊ ಶಾಪವು 

ಯಾರ ಮೆಚ್ಚಿಸಲು ಈ ಪರಿ ತಾಪವು


ಪುರಾಣಗಳ ಪಠಣ ,ಪಾಲಿಸಲು ಕಠಿಣ 

ಜೀವನ ಸರಿ ತಪ್ಪು ಗಳ ಹೂರಣ 

ಕಣ್ಣಿದ್ದು ಕುರುಡಂತಾಗಿ ಮೂಡನಾಗದಿರಿ 

ಹೆತ್ತ ಹೊಟ್ಟೆಗೆ ಕೊಳ್ಳಿಯನಿಡದಿರಿ 

ಕಳೆದು ಕೊಂಡ ನಂತರ ಕೊರಗದಿರಿ 

ಯಾರನ್ನೊ ಮೆಚ್ಚಿಸಲು ನಾಟಕವಾಡದಿರಿ 



Rate this content
Log in

Similar kannada poem from Abstract