ಮರಣಾನಂತರದ ಜೀವನ
ಮರಣಾನಂತರದ ಜೀವನ
1 min
288
ಕುಟುಂಬಕ್ಕೆ ಆಸರೆ ಆಗಿತ್ತು
ಆ ಜೀವ;
ಎಲ್ಲರ ಜವಾಬ್ದಾರಿಯ ಹೊರೆ
ಆ ಜೀವಕ್ಕೆನೆ...
ಮೊದಲು ತಂದೆ ತಾಯಿ
ಸಹೋದರ,ಸಹೋದರಿಯರ ಹೊಣೆ;
ನಂತರ ಮಡದಿ ,ಮಕ್ಕಳ
ಹೆಗಲೆರಿದ ಹೊಣೆ....
ಒತ್ತಡವೊ, ದುರಾದೃಷ್ಟವೊ
ಹಾರಿ ಹೋಯಿತು ಪಕ್ಷಿಯಂತೆ
ಒಂದು ದಿನ
ಮುಂದೆ ನೋಡಿ ಉಳಿದವರ ಜೀವನ....
ಅವನ ಮರಣಾನಂತರದ ಜೀವನ
ಎಲ್ಲರಿಗೂ ಸಹಿಸಲಾಗದ ಕ್ಷಣ,
ಅವನಿರುವವರೆಗೂ ಎಲ್ಲರೂ ಕೊಂಡಾಡಿದರು
ಅವನಿರದಿದ್ದಾಗ ಅವನ ಮಡದಿ ಮಕ್ಕಳ ದೂರಿದರು....
ಅವನಿಂದ ಪಡೆದ ಸಹಾಯ
ಸ್ವಲ್ಪವೂ ಇಲ್ಲ ಕನಿಕರ ಯಾರಿಗೂ,
ಯಾರು ಅರಿಯಲಿಲ್ಲ
ಮಡದಿ ಮಕ್ಕಳ ಹೊಣೆ ಹೊರಲಿಲ್ಲ....
ಅವನ ಮರಣಾನಂತರ
ಯಾರು ಸಹಾಯ ಮಾಡಲಿಲ್ಲ,
ಕ್ಷಣ ಕ್ಷಣವೂ ನೊಂದರು
ಹೊಟ್ಟೆಗೆ ಇರದೆ ಬೆಂದರು ಅವನ ಮಡದಿ ಮಕ್ಕಳು....

