ಅವ್ಯಕ್ತ...
ಅವ್ಯಕ್ತ...
ನಿನ್ನ ಪ್ರೀತಿಸಿದ
ಈ ಮನಸ್ಸು
ಖಾಲಿ ಹಾಳೆ
ಗೆಳತೀ..I
ನೀ
ಬರೆಯಬಹುದು
ಏನನ್ನಾದರೂ
ಅಂದಿದ್ದೆ...II
ನಾಚಿ ನೀರಾಗಿ
ನಕ್ಕಿದ್ದಳು..
ಅದೊಂದು ದಿನ
ಅವಳು ಬಿಟ್ಟು
ನಡೆದಾಗಲೇ
ಗೊತ್ತಾಗಿದ್ದು..
ಅವಳು ಬರೆದಿದ್ದಳು
ಅಪ್ಪ-ಅಮ್ಮನ
ಒತ್ತಾಯಕ್ಕೆ
ಮಣಿದಿದ್ದೇನೆ..
ನಿನ್ನ ಜೀವನ
ಚೆನ್ನಾಗಿರಲಿ..II
ನಾನು ಸರಿಯಾಗಿ
ಓದಿಕೊಂಡಿರಲಿಲ್ಲ
ಅಷ್ಟೇ..
ಅವಳನ್ನೂ ...II
