ನಿಗೂಢ
ನಿಗೂಢ
1 min
391
ಯಾರನ್ನೆ ಕೇಳಿದರು
ಸಿಗದು ಉತ್ತರ
ಎಲ್ಲರ ಮುಖದಲ್ಲೂ ಏನೊ ಆತಂಕ
ಅಲ್ಲಿ ಎಲ್ಲವೂ ನಿಗೂಢ;
ಮೊನ್ನೆ ಮೊನ್ನೆ ಚೆನ್ನಾಗಿದ್ದರು
ಇಂದು ಎಲ್ಲವೂ ಅಲ್ಲೋಲ ಕಲ್ಲೋಲ
ಮಾತು ಬಾರದ ಪ್ರಾಣಿಗಳದೂ
ಆಕ್ರಂದನ, ಕಾರಣ ಗೊತ್ತಿಲ್ಲ ಬರಿ ನಿಗೂಢ;
ಬಾಗಿಲಿಗೆ ಕಟ್ಟಿದ ತೋರಣ ಬಾಡಿಲ್ಲ
ಸಂತಸದ ಕ್ಷಣಗಳು ಇನ್ನೂ ಮಾಸಿಲ್ಲ
ಬಂದವರು ಇನ್ನೂ ಹೋಗಿಲ್ಲ
ಏನೋ ಆದಂತಿದೆ,ಆದರೂ ನಿಗೂಢ...

