STORYMIRROR

nagavara murali

Tragedy Fantasy Others

4  

nagavara murali

Tragedy Fantasy Others

ದುರಾಸೆ

ದುರಾಸೆ

1 min
309

ಕಷ್ಟದಲ್ಲಿದ್ದನೊಬ್ಬ ಬಡವ 

ದೇವರಲ್ಲಿ ಬೇಡಿ ಒಂದು

ಚಿನ್ನದ ಕಾಸು ಪಡೆದನು


ಉಜ್ಜಿದಷ್ಟು ನಿನಗೆ ಕಾಸು

ಎಷ್ಟು ಬೇಕೋ ಅಷ್ಟು ಉಜ್ಜು

ನಿಲ್ಲಿಸಿದರದು ಮಾತ್ರ

ಕೊಡದು ನಿನಗೆ ಎಂದಿಗೂ

ಮತ್ತೆ ಕಾಸು ಎಂದ ದೇವನು


ಧನ್ಯವಾದ ಹೇಳಿ ಬಂದು

ಕೋಣೆಯಲ್ಲಿ ಅವಿತು ಕೂತು

ಉಜ್ಜಿ ಉಜ್ಜಿ ಪಡೆದನು


ನಿಂತು ಹೋದೀತೆಂಬ ಭಯ

ದುರಾಸೆಗೆ ತಿರುಗಿತು

ಉಜ್ಜಿ ಉಜ್ಜಿ ಕೈಗಳಿಂದ

ರಕ್ತ ಸುರಿದರೂ ಸಹಿಸಿ

ಕೋಣೆ ತುಂಬ ಕಾಸ ರಾಶಿ

ನೋಡಿ ಪ್ರಾಣ ಬಿಟ್ಟನು


ಮರೆತು ರಾಶಿಯಲ್ಲಿ ಇದ್ದ

ಪ್ರಾಣ ಬಿಟ್ಟ ಇವನ ಮರೆತು

ಮನೆ ಮಂದಿಯೆಲ್ಲ ನಗುತ 

ಕುಣಿದು ಮೂಟೆ ಮೂಟೆ

ಬಾಚಿ ತುಂಬಿ ಕೊಂಡರು



Rate this content
Log in

Similar kannada poem from Tragedy