STORYMIRROR

nagavara murali

Others

3  

nagavara murali

Others

ಚಿತ್ರಾನ್ನ

ಚಿತ್ರಾನ್ನ

1 min
148

ಅಪಾರ ಹಣ ಲೂಟಿಗಾಗಿ

ವಾರದ ಹಿಂದೆ ಪರಪ್ಪನ ಜೈಲು

ಎಲೆಕ್ಷನ್ ಗಾಗಿ ಈಗ 

ಮುಖದಲ್ಲಿ ಹೊಸ ಸ್ಮೈಲು


ಸಿಂಹಾಸನದಂತೆ ಕುರ್ಚಿ 

ಇವರು ಮಾತ್ರ ಕೂರಲು

ಕೆಲವರು ಇವರ ಪಕ್ಕ

ಸ್ವಂತ ರಚನೆ ಮಾಡಿ ಹೊಗಳಲು


ಜನರಿಗೆ ಸುಡು ಬಿಸಿಲು

ಕಾರುಗಳಿಗೆ ಮಾತ್ರ ಒಳ್ಳೆಯ ನೆರಳು

ಕಾಲು ಸುಟ್ಟು ಓಡಿದರೆ

ಹೆದರಿಸಲು ಪೋಲೀಸ್ ಕೈಲಿ ಕೋಲು


ಚಿತ್ರಾನ್ನಕ್ಕೆ ಹೊಡೆದಾಡಿ

ಜನರೇ ಮಾಡಿದ ಉದ್ದುದ್ದ ಸಾಲು

ಹೇಳಿದರು ನನ್ನಲ್ಲಿದೆ ಫೈಲು

ನಿಮ್ಮೂರಿಗೆ ರಸ್ತೆ ಮೋರಿ ಮಾಡಿಸಲು


ಜನರಿಗೂ ಚೆನ್ನಾಗಿ ಗೊತ್ತು 

ಇವರು ಸುಮ್ಮನೆ ಬಿಡುವರು ರೈಲು

ಎಣಿಸಿ ನೊಡಿದರು ಪಾಪ

ಕೊಟ್ಟ ಆ ಐನೂರು ಎಲ್ಲರ ಕೈಲೂ


Rate this content
Log in