STORYMIRROR

nagavara murali

Classics Fantasy Others

4  

nagavara murali

Classics Fantasy Others

ಋತು

ಋತು

1 min
259

    ( 1)

ಮಳೆಯಾದರೆ

ಎಲ್ಲರ ಕೈಲೂ 

ಕೊಡೆ


ಛಳಿಯಾದರೆ

ನಾ ಬಿಡೆ

ನೀ ಕೊಡೆ


   ( 2)


ನೆನೆಯಲಾಸೆ

ಮಳೆಯಲ್ಲಿ

ಮದನೇ,


ನೆನೆಯಲಾಸೆ

ಮನದಲ್ಲಿ

ಅದನೇ


 (3)


ಸಿಡಿಲಿಗೆ ಬೆಚ್ಚಿ

ಕಣ್ಗಳ ಮುಚ್ಚಿ

ಬೆರಳ ಕಚ್ಚಿ

ಮನಸ ಬಿಚ್ಚಿ

ನೋಡಲು ಹುಚ್ಚಿ


    (4)

ಸೂರ್ಯನಿಂದ ಅರಳಿ

ಯಾರಿಂದಲೋ ಉರುಳಿ

ಯಾವ ಸೇವೆಗೋ ತೆರಳಿ

ತನ್ನಂದವ ಜನ ಹೊಗಳಿ

ನಿಶೆಗೆ ಪಾಪ ಅದು ಸುರಳಿ

ಹೂವಿನ ದಿನದ ಬಾಳು ತಿಳಿ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics