ಆಟದ ಅಂತ್ಯ
ಆಟದ ಅಂತ್ಯ
ಚಿಕ್ಕ ವಯಸ್ಸಿನಲ್ಲಿ ಮಗ ಸಂಜೆ ಆಡಿ
ಬರುತ್ತಿದ್ದಾಗ ಮೈ ಕೈ ಎಲ್ಲಾ ಮಣ್ಣು
ಕೈ ಹಿಡಿದು ಎಳೆದು ತಂದು ನಿಲ್ಲಿಸಿ
ಅಮ್ಮ ನೀರಲ್ಲಿ ತೊಳೆದಾಗ ಹೋಯ್ತು.
ದೊಡ್ಡವನಾದಮೇಲೂ ಗಲ್ಲಿ ಗಲ್ಲಿ ನೋಡಿ
ಬರುತ್ತಿದ್ದ ಆದರೆ ಮೈಯೆಲ್ಲಾ ಹುಣ್ಣು
ತಾನೇ ವೈಧ್ಯನಾದ ಎಲ್ಲರನೂ ಹೊರಗೆ ಕಳಿಸಿ
ಓಷಧವೇ ಇಲ್ಲದೆ ಬಹಳ ಹೆಚ್ಚಾಯ್ತು
ಮದುವೆಯಾದರೂ ಬಿಡದ ಚಾಳಿ ನೋಡಿ
ಇವನ ಮೇಲೆ ಊರವರ ಹದ್ದಿನ ಕಣ್ಣು
ಸಮಯ ದೂಡಲು ಕುಡಿತ ಮನೆಗೇ ತರಿಸಿ
ಯಾರೊಂದಿಗೂ ಬೆರೆಯದೆ ಹುಚ್ಚಾಯ್ತು
ಹರಿಸಿದರೇನು ಫಲ ಅತ್ತು ಕಣ್ಣೀರ ಕೋಡಿ
ತಿಳಿದು ನೊಂದರೇನು ಸುಖ ತನ್ನ ನಿಜ ಬಣ್ಣ
ಅರಿತು ಸಾವು ಸನಿಹವೆಂದು ತೆರೆ ಸರಿಸಿ
ಸನಿಹ ಯಾರಿಲ್ಲದೇ ಕಣ್ಣ ಮುಚ್ಚಾಯ್ತು
