ನಿಲುವುಗನ್ನಡಿ
ನಿಲುವುಗನ್ನಡಿ
ಅಪ್ರತಿಮ ಸೌಂದರ್ಯದ
ಸೊಬಗ ಸವಿದು ತಿಳಿಸುವೆ
ಹೊರ ಹೋಗುವಾಗ ಕರೆದು
ನಗು ನಗುತ ನಿನ್ನ ಕಳಿಸುವೆ
ನೀ ಒಡವೆ ವಸ್ತ್ರ ಧರಿಸಿದಾಗ
ಒಪ್ಪಿ ನಿನ್ನ ತಣಿಸಿ ಕುಣಿಸುವೆ
ಸಂತೋಷ ದುಃಖ ದುಮ್ಮಾನ
ಎಲ್ಲ ಕ್ಷಣಗಳಿಗೂ ಸ್ಪಂದಿಸುವೆ
ನೀ ಏಕಾಂತ ಬಯಸಿದಾಗ
ನಿನ್ನೊಂದಿಗಿರಲು ಬಯಸುವೆ
ಹೇಳು ನಾ ನಿರ್ಜೀವ ವಸ್ತುವೆ