STORYMIRROR

JAISHREE HALLUR

Romance Fantasy Others

4  

JAISHREE HALLUR

Romance Fantasy Others

## ಮುಸ್ಸಂಜೆಯ ಮಬ್ಬಿನಲಿ ###

## ಮುಸ್ಸಂಜೆಯ ಮಬ್ಬಿನಲಿ ###

1 min
282


ಮುಸ್ಸಂಜೆ ಮಬ್ಬಿನಲಿ ಕನಲಿವೆ

ನಿನ್ನೊಟಿಗೆ ನಾ ಹೆಣೆದ ಕನಸುಗಳು

ಬೆನ್ನಟ್ಟಿ ಕಾಡುತಿವೆ ಆ ಕಹಿ ನೆನಹುಗಳು

ಆಣೆಕಟ್ಟು ಕಟ್ಟಿಹೆ ಹನಿ ಜಾರದಂತೆ

ಹಣೆಬೊಟ್ಟು ಕರಗಿ ಕೆಳಗಿಳಿಯದಂತೆ..


ಸಾಣೆಹಿಡಿದು ಬಸಿದ ಹಸೀ ಭಾವಗಳ

ಮಣೆ ಹಾಕಿ ಸಲಹಿದವ ನೀನೆ ಅಲ್ಲವೇ

ಏಣಿಯಿಟ್ಟು ಅಟ್ಟ ಹತ್ತಲು ಸಹಕರಿಸಿ

ಆಣೆಯಿಟ್ಟು ಮನದಾಸೆಯನರಿತು

ಕಾಣೆಯಾದವ ನೀನು, ನಸುಕಿನಲೇ.


ಬೆಣ್ಣೆ ತೀಡಿದಂತೆ ಕೆನ್ನೆ ಸವರಿದವ ನೀ

ಕಣ್ಣ ಭಾಷೆಯಲೆ ಚುಂಬನಕಾಹ್ವಾನಿಸಿ

ಸಣ್ಣ ಆಸೆಗಳ ಹುಟ್ಟಿಸಿ ಕವನ ಬರೆದು

ಬಣ್ಣ ಬಣ್ಣದ ಕನಸಲೋಕಕೊಯ್ದು

ಹಣ್ಣಿಗೂ ಹೆಣ್ಣಿಗೂ ಅರ್ಥ ಕಲ್ಪಿಸಿದವ.


ಬಣ್ಣನೆಗೆ ನಿಲುಕದ ಅಂತರಂಗ ರಂಗು

ಸಣ್ಣನೆಯ ಕೊರಲಾಗಿ ಮಿಡಿದ ಭಾವ

ಕಣ್ಣ ಸನ್ನೆಗೆ ಏರಿಳಿವ ಉಸಿರ ಸಂಭ್ರಮ

ಮಣ್ಣ ವಾಸನೆಗೆ ಅರಳಿದ ಭುವಿಯಂತೆ 

ಎನ್ನ ಎದೆಭಾವ ತೊಯ್ದು ಭಾರವಾಗಿದೆ



Rate this content
Log in

Similar kannada poem from Romance