STORYMIRROR

JAISHREE HALLUR

Romance Classics Fantasy

4  

JAISHREE HALLUR

Romance Classics Fantasy

ಜೇನ ಹೊನಲು----

ಜೇನ ಹೊನಲು----

1 min
241

ಗೆಳತೀ,

ಆ ನಿನ್ನ ಪಾರದರ್ಶಕ ನೋಟ...

ಅದರೊಳಿಲ್ಲ ಮಾದಕತೆ..

ಅದರೊಳಿಲ್ಲ ಸಮ್ಮೋಹಕತೆ

ಅದರೊಳಿಲ್ಲ ಚಂಚಲತೆ


ನನಗೆ ಮಾತ್ರ ಅಲ್ಲಿ ಕಂಡಿತು

ಒಂದು ಆಳವಾದ ಪ್ರಪಾತ

ಪ್ರೀತಿಯ ಸುಳಿಯ ಒರತೆ

ಕಂಡಂದೇ ಸಿಲುಕಿ ಬೆರೆತೆ


ನಿನ್ನ ಮೌನ ತುಟಿಯಲಿ ಕರೆಯಿಲ್ಲ

ನಗೆಯ ಸಣ್ಣ ತುಣುಕು ಇಣುಕಿಲ್ಲ

ಬಗೆಬಗೆಯ ಕನಸು ನಾ ಕಾಣಲಿಲ್ಲ

ಆದರೂ ನೀನನಗೆ ಸನಿಹವಾದೆಯಲ್ಲ


ಯಾಕೆ ಗೊತ್ತೇ ನಿನಗೆ ಗೆಳತೀ

ನನ್ನೊಳಗೆ ಒಂದೇ ಮಾತಿದೆ

ನಿನಗೆ ಮಾತ್ರ ಅರ್ಥವಾಗುವಂತದ್ದು

ಅದು ಅರ್ಥವಾದ ದಿನವೇ ನೀ ಸಿಗುವೆಯೆಂದು...


ಕಾಯಬೇಕಲ್ಲ ಆ ಸಮಯಕೆ ವಿದಿಯಿಲ್ಲದೆ

ಕಾಯಿಬೆಲ್ಲ ಬೆರೆತ ಹೂರಣವಾಗಬೇಕಲ್ಲ

ಯಾವ ಕವಿಯೂ ಬರೆಯದಂತ ಕವನವಾಗಬೇಕಲ್ಲ

ನಮ್ಮ ಮಿಲನ ಸವಿಜೇನ ಹೊನಲಾಗಬೇಕಲ್ಲ..



Rate this content
Log in

Similar kannada poem from Romance