STORYMIRROR

JAISHREE HALLUR

Romance Classics Fantasy

4  

JAISHREE HALLUR

Romance Classics Fantasy

ನೆನಪುಗಳ ಹಾವಳಿ****

ನೆನಪುಗಳ ಹಾವಳಿ****

1 min
307

ಚಹ ಕುಡಿಯೋದು ಒಂದು ನಿಮಿತ್ತವಾಗಿತ್ತು.

ಏಕಾಂತದಲ್ಲಿ ಕುಳಿತು ಕೆಲಹೊತ್ತು ನಿನ್ನ ನೆನಪಲ್ಲಿ ಮುಳುಗಬೇಕಿತ್ತು.


ಚಹದ ಬಿಸಿ ಹಬೆಗೆ ಮನಸೂ ಬಿಸಿಯೆನಿಸಿತ್ತು.

ಮೋಹದೊಂದಿಗೆ ಭಾವ

ಹಸಿಯಾಗಿತ್ತು...


ಒಂದಿಂಚು ಸೊರಗಿದ್ದೀಯೆಂದಾಗ

ನೀನು ನಕ್ಕಿದ್ದೆ.

ನಿನ್ನ ನೆನಪಲ್ಲಿ ನಾ ಕೊರಗಿದ್ದು ಕಾಣಿಸಲೇ ಇಲ್ಲ ನಿನಗೆ.


ಈ ಬೆರಳತುದಿಗೆ ಕಪ್ಪು

ಇದ್ದರೂ, ಅದರಂಚಿಗೆ

ನಿನ್ನದೇ ತುಟಿಯ ಸ್ಪರ್ಶ.

ಮಾತಿನಲ್ಲೇ ನಗಿಸಿ

ಆಕರ್ಷಿಸುವ ಹರ್ಷ..


ನಾ ಮೋಡಿಗೊಳಗಾದೆನೋ, ನೀನೇ ನನ್ನೊಳಗೆ ಅವಿತೆಯೋ , ಅಂತೂ

ಪದಗಳಾದೆವು ಈ ಕವಿತೆಯಲ್ಲಿ.


ಮುಂಜಾನೆಯ ಚಳಿಗೆ

ನಿನ್ನ ನೆನಪದು ಕಚಗುಳಿ

ತಂತಾನೆ ಕೆಂಪೇರುವ

ಕದಪುಗಳಲ್ಲಿ ಓಕುಳಿ.

ನೀನಿತ್ತ ಬಳುವಳಿ, ಈ ನೆನಪುಗಳ ಹಾವಳಿ....



Rate this content
Log in

Similar kannada poem from Romance