ಬೆಳದಿಂಗಳ ಚಂದಿರ!!!!
ಬೆಳದಿಂಗಳ ಚಂದಿರ!!!!
ಬೆಳ್ಳಿ ಮಿನುಗಿತು ತಣ್ಣನೆಯ ಕೊಳದೊಳು
ಆ ಇರುಳ ಬೆಳದಿಂಗಳಿನಂದು..
ಆವ ಹೊಳಪಿಗೂ ಹೋಲಿಸಲಾಗದ ಮಿಂಚು
ಚಂದ್ರನಂದು ಬಾನಿಂದ ಇಳಿದಂತೆ...
ಕೊಳದೊಳಗೆ ಜಲಕ್ರೀಡೆಗೆಂದು ನನ್ನ ಕರೆದಂತೆ
ಕೈ ಮಾಡಿದಾಗ ಎಟುಕದೇ ಮಾಯವಾದಂತೆ..
ತುಂಟ ನಗೆ ಸೂಸಿ ಮಧುರ ಕಂಪನ ಹರಡುತ
ಎದೆಂಯಗಳದಿ ನರ್ತಿಸುತಿವೆ ಭಾವಗಳು..
ಈ ಕೊಳವದೆಷ್ಟು ಪುಣ್ಯವಂತೆ, ನಿನಗೆಂದೇ
ತುಂಬಿ ನಿಂತಿದೆ ತನ್ನೆಲ್ಲವನು ಅರ್ಪಿಸುತ
ಇಲ್ಲೇ ಕುಳಿತು ಇಡೀ ರಾತ್ರಿ ನಿನ್ನ ನೋಡುವಾಸೆ
ಆ ಬಿಂಬದೊಳು ದಿಟ್ಟಿಸುತ ನನ್ನೆ ಮರೆವಾಸೆ...🌹

