ಕನಸ ರಾಜಕುಮಾರ
ಕನಸ ರಾಜಕುಮಾರ
ಹೀಗಿರಬೇಕು ನನ್ನಿನಿಯ
ಕನಸಿನ ಅರಮನೆಯ ರಾಜಕುವರ
ಮನಸಿನ ಮಧುರ ಆಸೆಗಳ ಸಾಹುಕಾರ
ಪ್ರೀತಿಗಾಗಿಯೇ ಜನಿಸಿ ಬಂದ ಯಜಮಾನ
ಕನಸಿನ ಉಸಿರಿಗೆ ಆಸರೆಯಾಗಿ
ನೋವಿನ ದುಃಖಕ್ಕೆ ಹೆಗಲಾಗಿ
ನನ್ನ ಹೆಜ್ಜೆ ಜೊತೆಯಲ್ಲೇ ಅವನ ಹೆಜ್ಜೆ ಇರಬೇಕು
ನನ್ನ ಪ್ರೀತಿಗೆ ಅವನೇ ಊರುಗೋಲಾಗಬೇಕು
ಕಾಲದ ಪರೀಕ್ಷೆಗೆ ಎದೆಗುಂದದೆ
ಮನದ ಮೂಲೆಯಲ್ಲೂ ಸಂಶಯ ಜನಿಸದೆ
ನೋಡುವ ನೋಟದಲಿ ತಪ್ಪು ಕಾಣಿಸದೆ
ಮನದ ಸ್ನೇಹಿತನಾಗಬೇಕು
ದುಷ್ಟ ಚಟಗಳಿಗೆ ಬಲಿಯಾಗದೆ
ಕಷ್ಟ ಸುಖದಲ್ಲಿ ಜೊತೆ ನಿಂತು
ಬಣ್ಣ ಹೇಗಿದ್ದರೂ ಮನಸ್ಸು ಸುಂದರವಾಗಿರೋ
ಅವನು ನನ್ನವನಾಗಬೇಕು..!
ಮನದ ಖಾಲಿ ಸೌಧಕೆ ಅವನೊಬ್ಬನೇ
ಅರಸನಾಗಬೇಕು..

