ಜನ್ಮೋತ್ಸವ
ಜನ್ಮೋತ್ಸವ
ಹೃದಯವ ಮೀಟಿ ಬರೆದಿರೋ ಕವಿತೆ
ಕಾವ್ಯಕನ್ನಿಕೆಯಾ ಸುಂದರಕೆ
ಹೀಗೆ ತಾನೇ ಜೀವ
ಸೆರೆ ಹಿಡಿದ ಗಳಿಗೆ
ಹೃದಯವ ಮೀಟಿ ಬರೆದಿರೋ ಕವಿತೆ
ಕಾವ್ಯಕನ್ನಿಕೆಯಾ ಸುಂದರಕೆ
ಹಸಿರಿಗೆ ಮಂಜು ಕವಿಸಿದ ರೀತಿ
ನಲ್ಲೆಯಿವಳು ನನ್ನೊಳಗೆ
ಹೂವಿನಂತಿವಳ ಈ ಮುದ್ದಾದ
ಮೂಗುತಿಗೆ ಅಚ್ಚಾಕಿದಾ ಜೀವ ಯಾರೋ
ಪಾದದಲ್ಲೆ ಪದವ ಸದಾರಾಗ
ಸಮ್ಮಿಲನಗೊಳಿಸುವ ಬೆಡಗಿ
ಸಂಜೆ ಒಂದು ಘಳಿಗೆ ಈ ಮಾತೇ
ಮುತ್ತಾಗಿ ಕೂಗಿ
ಸುರಿಯೋ ಮಳೆಗೆ ಹೃದಯ ಕುಣಿಯೋ ತರ
ನಾ ಪ್ರೀತಿ ಮಂಜಿನ ಗೂಡ ಚಿಗುರು ತರ
ಹೀಗೆ ತಾನೇ ಪ್ರೀತಿ
ಸ್ಪುರಿಸಿತು ಜಗವ
ಪರದೆಯ ಸರಿಸು ದೂರಾಗದೆ
ಅಂತಾನೆ ಹತ್ತಿರಕೆ ಸರಿದು
ಸಡಿಲಿಸು ವಿರಸ
ಮುಚ್ಚುಮರೆ ಏನಿಲ್ಲ ಕೇಳು
ಜೀವ ಮೇಲಾಣೆ ಮಾಡು ಜನ್ಮೋತ್ಸವಾ ನಾ
ತಿಳಿಯೋ ಸಮಯದೀ ಈ ಹೃದಯೋತ್ಸವ
ಹೀಗೆ ಜೀವ ಪ್ರೀತಿ
ಪಯಣದ ಹೊನಲು
ಹೃದಯವ ಮೀಟಿ ಬರೆದಿರೋ ಕವಿತೆ
ಕಾವ್ಯಕನ್ನಿಕೆಯಾ ಸುಂದರಕೆ
ಹೀಗೆ ತಾನೇ ಜೀವ
ಸೆರೆ ಹಿಡಿದ ಗಳಿಗೆ

