ಹಸುರೇ ಉಸಿರು
ಹಸುರೇ ಉಸಿರು
ಹಸುರೇ ಉಸಿರು
ಬನ್ನಿರಿ ಮಿತ್ರರೆ ಧಾರಣ ಧರಣಿಗೆ
ಶಿರವನು ಬಾಗಿ ನಮಿಸೋಣ
ಪುಣ್ಯದ ಫಲವೇ ಇಲ್ಲಿನ ಜನನ
ಸಾರ್ಥಕ ಜೀವನ ನಡೆಸೋಣ
ಮನುಕುಲದ ಒಳಿತಿಗೆ
ಗಿಡ ಮರ ಸಲಹುತ
ಶುದ್ಧ ನೀರು ಗಾಳಿ ಬೆಳಕಿಗೆ
ನಾವೇ ಸಾಕ್ಷಿಯಾಗೋಣ
ಪ್ಲಾಸ್ಟಿಕ್ ಮಾರಿಯ ತೊಲಗಿಸಿ ನಾವೆಲ್ಲ
ಫಲವತ್ತತೆ ಭೂಮಿಯ ಉಳಿಸೋಣ
ಹೊಗೆಯನು ಉಗುಳಿ ಹೋಗದೆ ನಾವು
ಹೊಂಬೆಳಕಿನ ಮುನ್ನುಡಿ ಬರೆಯೋಣ
ಬೆಟ್ಟಗುಡ್ಡ ನದಿ ನಾಲೆಯ ಉಳಿಸುತ
ನಿಸರ್ಗ ನೀಡುವ ಶುದ್ಧತೆ ಬಳಸುತ
ಕಣಕಣ ಲವಣವ ಸವಿಯೋಣ
ಪ್ರಾಣಿ ಪಕ್ಷಿಗಳ ಉಳಿಸಲು ಬೆಳೆಸಲು
ಹೊಸ ಮುನ್ನಡಿಯನು ಬರೆಯೋಣ
ಜೀವದ ಜಲವು ಬೇಕಿದೆ ಮುಂದು
ಕಳೆಯದೆ ಉಳಿಸೋಣ ನಾವಿಂದು
ಮರಗಿಡ ಕಡಿದು ಮಳೆಯನು ಕಳೆಯದೆ
ಉಸಿರಿಗೆ ಹಸಿರನು ಉಳಿಸೋಣ
ತೋರಣ ಕಟ್ಟಲು ಎಲೆಗಳು ಬೇಕು
ಬನ್ನಿಮುಡಿಯಲು ಮರಗಳು ಬೇಕು
ಮೂಡುವ ಕಂದನ ನಗುಮೊಗ ನೋಡಲು
ಬಿದಿರಿನ ತೊಟ್ಟಿಲು ಕಟ್ಟಲೆ ಬೇಕು
ಬನ್ನಿರಿ ಮರಗಿಡಬಳ್ಳಿಯ ಬೆಳೆಸೋಣ
ಸಮೃದ್ಧ ಧರೆಯನು ಉಳಿಸೋಣ.
