STORYMIRROR

Shivanand karurmath

Drama Action Thriller

4  

Shivanand karurmath

Drama Action Thriller

ಮೊಬೈಲ್ ಬಂತು ಮೊಬೈಲ್..

ಮೊಬೈಲ್ ಬಂತು ಮೊಬೈಲ್..

1 min
401


ಹಿರಿಯರ ಜೊತೆಗಿನ ಹರಟೆಯ 

ಕಾಲವ ಮೊಬೈಲ್ ನುಂಗೈತೇ..ತಂಗಿ

ತಾಯಿಯು ನೀಡುವ ತುತ್ತಿನ 

ಪ್ರೀತಿಯ ಮರೆಸೈತೆ.....


ಎಲ್ಲರ ಕ್ಷೇಮವ ಕೇಳುವ ಕೌತುಕ 

ಕುಂದಿ ಹೋಗೈತೇ..ತಂಗಿ

ಮೊಬೈಲ್ ಬಂದು ತಂತಿವಾಹಿನಿ 

ತರತರ ನಡುಗೈತೆ....


ಪತ್ರವ ಬರೆಯುತ ಸಂಬಂಧ ನೆನೆವ 

ಸಂಬೋಧನೆ ಸತ್ತೈತೆ..ತಂಗಿ

ಮೊಬೈಲ್ ಮೆಸೇಜ್ ಎನ್ನುತ 

ಎಲ್ಲವು ಮುಳುಗೀ ಹೋಗೈತೆ...


ಕೈಯಲಿ ವಾಚು ಕಣ್ಮರೆಯಾಗಲು 

ಕಾರಣವೊಂದೈತೇ..ತಂಗಿ

ಅದುವೇ ಮೊಬೈಲ್ ಎಲ್ಲರ ಐಲು 

ಸಮಯವ ಸಾಯಿಸೈತೆ.


ಇರಳನು ನುಂಗಿ ಬೆಳಕನು ನೀಡುವ 

ದೀವಿಗೆ ಎಲ್ಲೋತೇ..ತಂಗಿ

ಮೊಬೈಲು ಟಾರ್ಚು ಮೂಡುತಲಿಂದು

ಅದನೂ ಕಸಿದೈತೆ...


ಮನೆಯಲ್ಲಿ ಮುಂಜಾನೆ ಹೇಳುವ

ಸುಪ್ರಭಾತವು ನಿಂತೈತೇ..ತಂಗಿ

ಮೊಬೈಲ್ ಬಂದು ಮ್ಯೂಸಿಕ್ ಪ್ಲೇಯರ್

ಮಾಯವಾಗೈತೆ...


ಚಿನ್ನಿದಾಂಡು ಚೆಸ್ಸು ಕೇರಮ್ 

ಮೂಲೆಗುಂಪಾಯ್ತೆ... ತಂಗಿ

ಎಲ್ಲಾ ಗೇಮು ಮೊಬೈಲ್ನಲ್ಲಿ

ಬಂದು ಮೈದಾನ ಮರೆಸೈತೆ


ಕಣ್ಣಿಗೆ ದೇಹಕೆ ಮನಸಿಗೆ ಹಾನಿ

ಮೊಬೈಲು ಮಾಡುತೈತೇ..ತಂಗಿ

ಮಲಗುವ ನಿದ್ರೆಗೆ ಕಾಣುವ ಕನಸಿಗೆ 

ಬೆಂಕಿಯ ಹಚ್ಚುತೈತೆ


ಬಳಸದೆ ಇರೋಣ ಅವಶ್ಯ ಮೀರಿ 

ಒಳಿತು ಆಗುತೈತೆ..ತಂಗಿ

ಮನಸ್ಸು ಅರಳಿ ಕುತೂಹಲ ಕೆರಳಿ

ಸಂಬಂಧ ಉಳಿದು ಬೆಳಿತೈತೆ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Drama