ಸಂಕಲ್ಪ ಮಾಡೋಣ
ಸಂಕಲ್ಪ ಮಾಡೋಣ
ಸಂಕಲ್ಪ ಮಾಡೋಣ.
ಕಾಲಕ್ಕೆ ತಡೆಗೋಡೆ ಕಟ್ಟೋರು, ಹುಟ್ಟಿಲ್ಲಸೂರ್ಯನ ಬೆಳಕನ್ನು ತಡೆಯೋರು
ನಿಂತಿಲ್ಲಹಗಲುರಾತ್ರಿಗಳ ಲೆಕ್ಕ ತಪ್ಪಿಸೋರು ಯಾರಿಲ್ಲಜನನಮರಣಗಳ ಮರ್ಮವನರಿತವರು ಯಾರು?
ಇಂದಿಲ್ಲ ತಿಳಿದವರು, ಹುಟ್ಟಲ್ಲ ಮುಂದ್ಯಾರು...
ಕಷ್ಟ ಸುಖಗಳು ಎರಡು ಬರುತಾವೆ ಜೋರು!
ಕನಸುಗಳು ನನಸಾಗದೆ ಉಳಿತಾವೆ ಚೂರುಸುಳ್ಳು ಮೋಸದ ಸಂತೆ ವ್ಯಾಪಾರ ಬಲುಜೋರು!
ಸತ್ಯಕ್ಕೆ ಅವನಬಿಟ್ಟು ಸಿಕ್ಕಿಲ್ಲ ಇನ್ಯಾರು...
ಶಾಂತ ಸುಖಜೀವನ ಸೌಹಾರ್ದತೆಯ ಪಾಠಎಲ್ಲ ಮತಗಳು ಒಟ್ಟಾಗಿ ಸಾರುವುದೇ ದಿಟ
ಇದನು ತಿಳಿಯಲೊಲ್ಲರು ಜಾಣ ಕುರುಡರಾಗಿಕೊಲ್ಲುತಿಹರು
ಎಲ್ಲದನು ಧರ್ಮಾoಧರಾಗಿ ವಿಶ್ವಪ್ರೀತಿಯ ಬೆಳೆಸೋಣ ನಾವಿರುವ ಎಲ್ಲೆಡೆಸಹೋದರತೆಯ ಸಾರೋಣ
ಶಾಂತಿಗಾಗಿ ಎಲ್ಲಡೆಕಾಣುವುದರಲ್ಲಿ ಒಳ್ಳೆಯದೇ ಹುಡುಕೋಣಕಾಯವನು ಕಾರ್ಯಕ್ಕೆ ಮೀಸಲಿರಿಸಿ ಬದುಕೋಣ
ಸ್ವಂತಕ್ಕೆ ಸ್ವಲ್ಪ ಸಮಾಜಕೆ ಸರ್ವಸ್ವದ ಸಂಕಲ್ಪ ಮಾಡೋಣ.
