ಪ್ರಶ್ನೆಗಳು
ಪ್ರಶ್ನೆಗಳು


ಎಲ್ರಿಗೂ ಗೊತ್ತು
ಒಂದಿನ ಹೋಗ್ಲೇ ಬೇಕೆಂತ
ಹಾಗಿದ್ರೆ ಹುಟ್ಟೋದ್ಯಾಕಂತ
ಮಕ್ಕಳು ಮರಿ ಆದ್ರೆ
ಸಂಸಾರ ಸ್ವರ್ಗವೇನಲ್ಲ
ಆದರೂ ಜನ ಬೇಡ ಅನ್ನಲ್ಲ
ಬಿಸ್ಲಿಲ್ಲ ಮಳೆ ಇಲ್ಲ
ಒಬ್ಬರೇ ಹೋಗಕ್ಕೆ
ದೊಡ್ಡ ಕಾರ್ ಏತಕ್ಕೆ
ಹಾಕ್ಕೊಳ್ಳೋದು
ಒಂದು ಜೊತೆ ಚಪ್ಪಲಿ
ಹತ್ತು ಜೊತೆ shelf ನಲ್ಲಿ
ವಾಸಕ್ಕೆ ಒಂದು ಮನೆ
ಮಾಡೋದು ತಮಗೊಂದು
ಮನೆ ಮಂದಿಗೆಲ್ಲಾ ಒಂದೊಂದು
ಉತ್ತರವಿಲ್ಲದ ಪ್ರಶ್ನೆಗಳು
ಇಲ್ದೇ ಇದ್ದೋರು ಕೇಳ್ತಾರೆ
ಇರೋರು ನಕ್ಕು ಸುಮ್ನಾಗ್ತಾರೆ