ಶಂಕರನಾಗ್
ಶಂಕರನಾಗ್
ಹೇಳಿದೆ ಮನವು ನಿಮಗೆ ವಂದನೆ
ನುಡಿಯಲಾಗದೆ ನೆನೆದಾಗ ಕಣ್ಣು ತುಂಬಿದೆ
ಯಾವುದೋ ಜನ್ಮದ ಪುಣ್ಯವೋ
ಪಡೆದೆವು ನಿಮ್ಮನ್ನು ಅಂದು
ಹರುಷದ ಹೊನಲು ಹರಿದಿತ್ತು
ಒಳ್ಳೆಯತನ ವೇನೆಂದು ತಿಳಿದಿತ್ತು
ಕನಸುಗಳು ಕಟ್ಟ ಬೇಕು
ಅದಕ್ಕಾಗಿ ದುಡಿಯಬೇಕು ಎಂಬ
ತತ್ವವನ್ನು ಅರಿತೆವು
ಇಂದು ಜೊತೆಗಿರದಿರೆ ನೀವು
ಎದೆಯಲ್ಲಿ ಸಣ್ಣ ನೋವು
ಮನದಲ್ಲಿ ನೆನಪಿನ ಹಸಿರು
ನೀವಾದಿರಿ ಎಲ್ಲರ ಉಸಿರು
ತಲೆಯಲ್ಲಿ ಪ್ರಶ್ನೆ ಒಂದೇ
ಕರುಣೆ ತೋರದೇ ಹೋದೆಯ ದೇವನೆ
"ಶಂಕರ್ ನಾಗ್" ಎಂಬ ಹೆಸರೇ ಅಮರ
ಕಿವಿಯಲ್ಲಿ ಗುಯ್ ಗುಡುವ ಭ್ರಮರ
ಮತ್ತೆ ಹುಟ್ಟಿ ಬರಬೇಕೆಂದು ಕೋರುವ
ಅವರಂತೆ ನಾವಾಗಬೇಕೆಂದು ಬಯಸುವ
ಸ್ಪೂರ್ತಿಗೆ ಸ್ಪೂರ್ತಿ ಅವರ ಕೀರ್ತಿ
ಅಳವಡಿಸಿಕೊಳ್ಳವ ಅವರ ರೀತಿ
