STORYMIRROR

Ranjitha M

Classics Inspirational Others

4  

Ranjitha M

Classics Inspirational Others

ಪುಸ್ತಕವೇ ನನ್ನ ಸ್ನೇಹಿತ

ಪುಸ್ತಕವೇ ನನ್ನ ಸ್ನೇಹಿತ

1 min
256

ಪುಸ್ತಕವೇ ನನ್ನ ಸ್ನೇಹಿತ

ಮಸ್ತಕಕ್ಕೆ ಜ್ಞಾನವ ತುಂಬುವ ಗೆಳೆಯ

ಕುಳಿತಲ್ಲಿಯೇ ಹೊಸದೊಂದು ಲೋಕಕೆ

ಕರೆದೊಯ್ಯುವ ಮಾಯಾವಿ ಈ ಪುಸ್ತಕ


ಪುಸ್ತಕವೇ ನನ್ನ ಸ್ನೇಹಿತ

ಹಸ್ತದಿ ಕುಳಿತು ನಗುವ ಮಾಂತ್ರಿಕ

ಬಗೆಬಗೆಯ ಅರಿವ ಉಣಬಡಿಸುವ ಬಾಣಸಿಗ

ಅಡಿಗೆ ಪುಸ್ತಕಗಳಿಂದಲು ಕಲಿಯಬಹುದು ಅಡಿಗೆ


ಪುಸ್ತಕವೇ ನನ್ನ ಸ್ನೇಹಿತ

ಜಾಸ್ತಿ ಓದುತ್ತಾ ಹೋದಂತೆ ಗುರುವಾಗುವವ

ನವನವೀನ ವಿಷಯಗಳ ಕಲಿಸುವವ

ಕಾದಂಬರಿಗಳ ಓದು ಸಿನಿಮಾ ಕಂಡಂತೆ ರೋಚಕ


ಪುಸ್ತಕವೇ ನನ್ನ ಸ್ನೇಹಿತ

ಬದುಕಲು ಕಲಿಸಿದ ಭಾವ ಬಂಧು 

ನೀ ಏಕಾಂಗಿಯಲ್ಲ , ನಾನಿದ್ದೇನೆಂದು 

ನನ್ನೊಂದಿಗೆ ಸಮಯ ಕಳೆದ ಉತ್ತಮ‌ ಸ್ನೇಹಿತ ಈ ಪುಸ್ತಕ 


ಪುಸ್ತಕವೇ ನನ್ನ ಸ್ನೇಹಿತ....

ಪುಸ್ತಕವೇ ನನ್ನ ಮಿತ್ರ....‌ 

ನನ್ನೆಲ್ಲ ನೋವು ನಲಿವುಗಳಿಗೆ 

ನಗದೆ, ಅಳದೆ ,ಕೊಂಕು ನುಡಿಯದೆ ,ಹೀಯಾಳಿಸದೆ

ನಿರ್ಲಿಪ್ತವಾಗಿ ಉಳಿದುಬಿಡುವ ಆಪ್ತ ಬಂಧುವೇ ಈ ಪುಸ್ತಕ.



Rate this content
Log in

Similar kannada poem from Classics