ಹೂವಿನ ಭಾಗ್ಯ
ಹೂವಿನ ಭಾಗ್ಯ
ಚೈತ್ರದಲಿ ಅರಳಿದ
ಘಮಘಮಿಸುವ ಪಾರಿಜಾತದ ಹೂವು
ಒಂದೇ ದಿನದಲ್ಲಿ ಅದರ ಹುಟ್ಟು ಸಾವು
ಆದರೂ ಅದಕೆ ಎಳ್ಳಷ್ಟೂ ನೋವಿಲ್ಲ
ಕಂಪು ಸೂಸುವ ಹೂವುಗಳಲಿ
ಪರಿಮಳ ತುಂಬಿದೆ ಹೃದಯದಲಿ
ಟೊಂಗೆ ಟೊಂಗೆಗಳಲಿ ಹರಡಿದೆ ( ಅರಳಿದೆ )
ಬಣ್ಣ ಬಣ್ಣದ ಹೂವುಗಳು
ಗೊಂಚಲು ಗೊಂಚಲಾಗಿ
ಚುಚ್ಚಿದೆ ಕಣ್ಣಿನ ದೃಷ್ಟಿಯಲಿ
ಸಿಂಗಾರಗೊಂಡಿದೆ ಹಬ್ಬದಲಿ
ಬಾಗಿಲಲ್ಲಿ ತೋರಣವಾಗಿ
ಸೇವಂತಿಗೆ , ಪಾರಿಜಾತದಲಿ ಹರಡಿದೆ ಕಂಪು
ದೂರ ದೂರದ ತನಕ
ಗುಡಿಯಲಿರುವ ದೇವರ ಪೂಜೆಗೆ
ಸಂಪಿಗೆ ಬಿಟ್ಟರೆ ಗತಿಯಿಲ್ಲ
ದುಂಬಿಗೆ ಮಧುವು ಬೇಕಲ್ಲ
ಹಸಿವೆಗೆ ಜೇನು ಉದರದಲಿ
ನೀಡುವುದು ಭಾಗ್ಯ ಮಡಿಲಿನಲಿ
ಸ್ವಾರ್ಥವು ಇರದ ಬದುಕಿನಲಿ
ಚೆಲುವಿನ ಹಿರಿತನ ನಡತೆಯಲಿ
ನಮಗೆಲ್ಲಿ ಹೂವಿನ ಭಾಗ್ಯ ?
ಕಲಿತರೆ ಧನ್ಯತೆ ಜೀವನದಲಿ !