STORYMIRROR

Sugamma Patil

Classics Inspirational Others

4  

Sugamma Patil

Classics Inspirational Others

ನಿನಗೆ ನಾನು ನನಗೆ ನೀನು

ನಿನಗೆ ನಾನು ನನಗೆ ನೀನು

1 min
159

 


ಬಡವನ ಗುಡಿಸಲು ಮೆಚ್ಚಿ ಬಂದೆ 

ಒಡಹುಟ್ಟಿದವರ ತೊರೆದು ನಿಂದೆ

ಏಳು ಹೆಜ್ಜೆ ಇಟ್ಟು ಮನವ ತುಂಬಿದೆ

ಏಳೇಳು ಜನ್ಮಕೂ ಸಂಗಾತಿ ನೀನೆಂದೆ


ಬಯಸಿ ಬಯಸಿ ಹರಕೆಯನು ಹೊತ್ತೆ

ಬಂಗಾರದಂಥ ಮುದ್ದು ಮಕ್ಕಳನ್ನು ಹೆತ್ತೆ

ಸಾಕಿ ಸಲಹುತ ಪ್ರೀತಿ ವಾತ್ಸಲ್ಯವ ಕೊಟ್ಟೆ

ಮಾತೃ ಹೃದಯದಿಂದ ಕೈತುತ್ತನ್ನು ಇಟ್ಟೆ


ತಾಯಿ ಹಾಲು ವಿಷವಾಗಿ ಹೋಯಿತಿಂದು

ತಂದೆ ಸಂಸ್ಕಾರ ನಾಶವಾಯಿತು ಯಾಕಿಂದು

ನಾವು ಹೆತ್ತ ಮಕ್ಕಳು ನಮಗಾಗಲಿಲ್ಲವಿಂದು

ನಾವಿಟ್ಟ ಕನಸುಗಳು ಹೊಸಕಿ ಹಾಕಿದರಿಂದು


ಹಗುರಾದ ಮನಸಿನಲ್ಲಿ ಭಾರವಾದ ನೋವಿಟ್ಟು

ಬಿಟ್ಟೋದ ಮಕ್ಕಳವರು ಅಕ್ಕರೆಗೆ ಕೊಳ್ಳಿ ಇಟ್ಟು

ಬೇರೆ ಯಾರೂ ಬರರು ನಮ್ಮಯ ಬದುಕಿಗಿನ್ನು 

ನಿನಗೆ ನಾನು ನನಗೆ ನೀನು ಇಷ್ಟೇ ಜೀವನವಿನ್ನು


Rate this content
Log in

Similar kannada poem from Classics