STORYMIRROR

Sugamma Patil

Others

3  

Sugamma Patil

Others

ಹೆಣ್ಣು ಹೊರೆಯಲ್ಲ ವರವೇ ಆಗಿಹಳಲ್ಲ

ಹೆಣ್ಣು ಹೊರೆಯಲ್ಲ ವರವೇ ಆಗಿಹಳಲ್ಲ

1 min
5



ಹೆಣ್ಣು ಹೊರೆಯಲ್ಲ ವರವೇ ಆಗಿಹಳಲ್ಲ
ಆದರೂ ಹುಣ್ಣೆಂದು ಜಗದಿ ಜರಿಯುವರಲ್ಲ
ಮಗಳಾಗಿ ಮನೆ ಬೆಳಗುವ ಜ್ಯೋತಿಯವಳು 
ಸೊಸೆಯಾಗಿ ವಂಶ ಬೆಳೆಸುವ ಗೃಹಲಕ್ಷ್ಮಿ ಅವಳು

ಸಿಕ್ಕಿಲ್ಲ ಅವಳಿಗಿನ್ನೂ ಸರಿಸಮಾನ ಸ್ಥಾನಮಾನ
ದಿಕ್ಕು ದಿಕ್ಕುಗಳಲ್ಲಿ ತುಂಬಿದೆ ಅವಳದೇ ಆಕ್ರಂದನ
ಬೇಕಿಲ್ಲ ಅವಳಿಗೆ ಸಮಾನತೆ ಆಶ್ವಾಸನೆಯ ಮಾತು
ಜಯಿಸಿ ಬದುಕುವಳು ಅವಳು ಎಲ್ಲದಕ್ಕೂ ಸೋತು

ಸರ್ವರ ಹಿತ ಬಯಸುವ ಉದಾರ ಗುಣದವಳು
ತಾಳ್ಮೆಯ ಗಣಿಯಾಗಿ ಮನೆಯನು ನಡೆಸುವಳು
ಒಳ ಹೊರಗೂ ದುಡಿದು ಬದುಕು ರೂಪಿಸುವಳು
ದಿನವಿಡಿ ದಣಿದರು ಮಂದಹಾಸವನು ಬೀರುವಳು 

ಹೊತ್ತು ಹೊತ್ತಿಗು ಬೇಯಿಸಿ ಹಾಕುವಳು ಕುಂತು
ಮಿಕ್ಕುಳಿದಷ್ಟೆ ಅನ್ನವನ್ನು ಉಣ್ಣುವಳು ಕೂತು
ಕುಟುಂಬದ ಯಶಸ್ಸಿಗೆ ಕಾರಣವಾದರೂ ಕಾಣದಕೈ
ಸಕಲ ಕ್ಷೇತ್ರದಲ್ಲಿ ಆಗಿಹದಿಂದು ಅವಳದೆ ಮೇಲುಗೈ

✍️ ಸೂಗಮ್ಮ ಡಿ ಪಾಟೀಲ್
      ಉತ್ನಾಳ್ 













Rate this content
Log in