STORYMIRROR

Sugamma Patil

Classics Inspirational Others

4  

Sugamma Patil

Classics Inspirational Others

ಮಹಾಚೇತನ

ಮಹಾಚೇತನ

1 min
143


ಹೆತ್ತ ತಾಯಿಯ ಮಡಿಲು ತೊರೆದಿರಿ

ಜಗದ ಉದ್ಧಾರಕೆ ಹೆಗಲು ಕೊಟ್ಟಿರಿ

ಸಿದ್ಧಾರೂಢರ ಮಾರ್ಗದಲಿ ನಡೆದಿರಿ

ಆಧ್ಯಾತ್ಮಿಕ ಸಾಧನೆಯನು ಮಾಡಿದಿರಿ


ಲೋಕ ಕಲ್ಯಾಣಕ್ಕಾಗಿ ಅವತರಿಸಿದಿರಿ

ಹಾನಗಲ್ ಮಠದ ಪೀಠಾಧಿಪತಿಯಾದಿರಿ

ಅನಕ್ಷರತೆ ತೊಲಗಿಸಲು ಶಾಲೆಗಳ ತೆರೆದಿರಿ

ತತ್ವಜ್ಞಾನದ ಅರಿವು ಮಕ್ಕಳಲಿ ತುಂಬಿದಿರಿ


ಧೀನ ದುರ್ಬಲರಿಗೆ ನೆರಳಾಗಿ ಬದುಕಿದಿರಿ

ಅಂಧರ ಬಾಳಿನ ಅಂಧಕಾರವ ಅಳಿಸಿದಿರಿ

ಸಂಗೀತ ಸಾಹಿತ್ಯ ಲೋಕವನು ಬೆಳಗಿದಿರಿ

ಸರ್ವ ಕ್ಷೇತ್ರದಲ್ಲೂ ಹೆಸರನು ಸಾಧಿಸಿದಿರಿ


ಸಮಾಜಮುಖಿ ಕಾರ್ಯವ ಮಾಡಿದಿರಿ

ಜನರ ಸೇವೆಯಲ್ಲಿಯೇ ಶಿವನ ಕಂಡಿರಿ 

ಕುಮಾರ ಶಿವಯೋಗಿ ಗುರುಗಳಾದಿರಿ 

ಭಕ್ತರ ಮನದಲ್ಲಿ ದೇವರಾಗಿ ನೆಲಸಿದಿರಿ


Rate this content
Log in

Similar kannada poem from Classics