STORYMIRROR

Sugamma Patil

Romance Classics Others

4  

Sugamma Patil

Romance Classics Others

ಬಾಳ ಸಂಗಾತಿ

ಬಾಳ ಸಂಗಾತಿ

1 min
16

ನಾನು ಮುದ್ದಿಸಿದ್ದಕ್ಕಿಂತ

ಮುನಿಸಿಕೊಂಡ್ಡಿದೆ ಹೆಚ್ಚು

ಆದರು ಅವನಿಗೆ ನಾನೇ

ಅಚ್ಚುಮೆಚ್ಚು ಯಾಕೆಂದರೆ

ಅವನಿಗೆ ನಾನೇ ಉಸಿರು 


ನಾನು ಕೇಳಿದ್ದಕ್ಕಿಂತ

ಅವನು ಕೊಟ್ಟಿದ್ದೆ ಹೆಚ್ಚು

ಆದರು ಇಲ್ಲ ಚೂರು

ಅವನಿಗೆ ನನ್ನ ಬಗ್ಗೆ

ಇರಿಸು ಮುರಿಸು ಯಾಕೆಂದರೆ

ಅವನಿಗೆ ನಾನೇ ಉಸಿರು


ನಾನು ಮಾತಾಡಿದ್ದಕ್ಕಿಂತ

ಜಗಳ ಆಡಿದ್ದೆ ಹೆಚ್ಚು

ಆದರು ಬೇಡವೆನಿಸಲಿಲ್ಲ

ಬೇಸರ ಮಾಡಿಕೊಂಡವನಲ್ಲ

ನನ್ನದೇ ಹುಚ್ಚವನಿಗೆ ಯಾಕೆಂದರೆ

ಅವನಿಗೆ ನಾನೇ ಉಸಿರು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance