STORYMIRROR

Sugamma Patil

Inspirational

4  

Sugamma Patil

Inspirational

ಬಚ್ಚಿಟ್ಟ ಭಾವಗಳು

ಬಚ್ಚಿಟ್ಟ ಭಾವಗಳು

1 min
18



ನೀನೆಂದು ಅರಿಯುವೆ ಇನಿಯ 
ನಾ ಬಚ್ಚಿಟ್ಟ ಭಾವಗಳು ಎಷ್ಟೆಂದು 
ನೀನೆಂದು ಜೊತೆಯಾಗುವೆ ಗೆಳೆಯ 
ನಾ ಕಟ್ಟಿದ ಆಸೆಗಳಿಗೆ ರೆಕ್ಕೆಯಾಗಲು 

ನಿನಗಾಗಿ ಹಗಲಿರುಳು ಕಾಯುತಿಹೆ 
ಅಂತರಂಗದೊಳಗೆ ಅಡಗಿ ಕುಳಿತಿಹ 
ಭಾವಗಳು ಅಲ್ಲೇ ಕರಗುವ ಮುನ್ನ 
ಹನಿ ಕಂಬನಿ ಜಾರುವ ಮೊದಲೇ 

ಕವಿದ ಮೋಡ ಸರಿಸಿ ಶಶಿಯಾಗಿ 
ಉದಯಿಸಿ ಬೆಳಗಲು ಬಂದು ಬಿಡು 
ಇಹಲೋಕ ತ್ಯಜಿಸುವ ಮುಂಚೆಯೇ 
ಆವರಿಸಿ ಬಿಡು ನನ್ನ ಮನದ ತುಂಬಾ 

ಆಡಲಾರದ ಅದೆಷ್ಟೋ ಮಾತುಗಳು 
ಅರ್ಥೈಸಿಕೊಂಡು ಬಿಡು ಒಮ್ಮೆ ನೀನು 
ನನ್ನೊಳಗಿನ ನಿನ್ನ ಮೇಲಿನ ಪ್ರೀತಿಯ 
ಭಾವಗಳನ್ನು ನಾ ಹೇಳುವ ಮುನ್ನವೇ 

✍️ ಸೂಗಮ್ಮ ಡಿ ಪಾಟೀಲ್ 
        ಉತ್ನಾಳ್ 







ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational