STORYMIRROR

Sugamma Patil

Inspirational Others

4  

Sugamma Patil

Inspirational Others

ಹೂವಮ್ಮ

ಹೂವಮ್ಮ

1 min
17



ಬಡತನ ತುಂಬಿದೆ ಮನೆಯಲ್ಲಿ 
ತಂದು ಹಾಕುವರು ಯಾರಿಲ್ಲಿ 
ದುಡಿಯದೇ ಬದುಕಿದು ಸಾಗಲ್ಲ 
ಹೂವುಗಳೇ ಆಸರೆ ಆಗಿಹದಲ್ಲ 

ಮಲ್ಲಿಗೆ ಬುಟ್ಟಿ ತಲೆಯಲಿ ಹೊತ್ತು 
ಎಲ್ಲೆಡೆ ಹೋಗಿ ಮಾರುವ ನಿಯತ್ತು 
ಮಲ್ಲಿಗೆ ಮನಸ್ಸಿನ ಮಹಿಳೆ ಇವಳು 
ಬಂದ ಕಾಸನು ಕೂಡಿಸಿ ಇಡುವಳು 

ಬಗೆ ಬಗೆ ಬಯಕೆ ಎದೆಯಲ್ಲಡಗಿಸಿ 
ಕಂಗಳ ತುಂಬಾ ಭರವಸೆ ತುಂಬಿಸಿ  
ಬೇಸರವಿಲ್ಲಾ ಅವಳ ಮುಖದಲ್ಲಿ 
ಕಾಯಕ ಮಾಡುವಳು ನಿಷ್ಠೆಯಲ್ಲಿ 

ಬದುಕಲಿ ಬವಣೆ ಎಷ್ಟೇ ಇದ್ದರು 
ನೋವಿನಲ್ಲಿ ಮನಸಿಂದು ಕುದ್ದರು 
ನಗುತಲಿ ಬಾಳ ಬಂಡಿ ನಡೆಸುವಳು
ಮಲ್ಲಿಗೆಯ ಮಾರಾಟ ಮಾಡುವಳು 

✍️ ಸೂಗಮ್ಮ ಡಿ ಪಾಟೀಲ್ 
      ಉತ್ನಾಳ್ 






ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational