STORYMIRROR

Sugamma Patil

Inspirational Others

4  

Sugamma Patil

Inspirational Others

ಮಲ್ಲಿಗೆ ಮಾಲೆ

ಮಲ್ಲಿಗೆ ಮಾಲೆ

1 min
53



ಮಲ್ಲಿಗೆ ಬುಟ್ಟಿ ತಲೆಯಲಿ ಇಟ್ಟು 
ಮಾರುತ ಬರುತಿಹಳು 
ಮಲ್ಲಿಗೆ ಮಾಲೆ ಪರಿಮಳ ಬೀರಲು
ಮುಗಿ ಬೀಳುವ ನಾರಿಯರು 

ಘಮ ಘಮಿಸುವ ಮಲ್ಲಿಗೆ ಮಾಲೆ
ಬಾಲೆಯರ ಸೆಳೆಯುವುದು 
ದೇವರ ಪಾದವನ್ನು ಸೇರುವ ತವಕದಿ 
ಮಾಲೆಯೂ ಬಯಸುವುದು 

ಮುತ್ತೈದೆಯರ ಸೌಭಾಗ್ಯದ ಸಿರಿಯನು 
ಕೊಳ್ಳಲು ಬರುತಿಹರು 
ಸತಿಗೆ ಪತಿಯ ಒಲುಮೆಯ ಸುಮವು 
ಮುಡಿಯನೇರಿ ನಲಿಯುವುದು.

ಮಾಲೆಯ ಬುಟ್ಟಿ ಖಾಲಿ ಆಗುತಲಿ 
ಮನೆಗೆ ಮರಳುವಳು 
ದುಡಿದ ದುಡ್ಡನು ಎಣಿಸಿ ನೋಡುತ 
ಸಂತಸದ ನಗೆ ಬೀರುವಳು 

✍️ ಸೂಗಮ್ಮ ಡಿ ಪಾಟೀಲ್ 
      ಉತ್ನಾಳ್


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational