STORYMIRROR

Sugamma Patil

Inspirational

4  

Sugamma Patil

Inspirational

ಕನಸೇ

ಕನಸೇ

1 min
9

*ಕನಸೇ*

ರೆಪ್ಪೆ ಮುಚ್ಚದೆ ಕಂಡಿರುವ ಕನಸುಗಳು 
ನುಚ್ಚು ನೂರಾಗಿ ಹೋಗಿವೆ 
ಮತ್ತೆ ಮತ್ತೆ ಚೂರಾದ ಕನಸುಗಳನ್ನು 
ಪೋಣಿಸಿ ಕಾಯುತಿರುವೆ 

ಎಂದಾದರೂ ಮುಂದೊಂದು ದಿನಾ 
ನನಸಾಗುವುದು ಎಂದು
ನೋಡಿ ನಗುವವರು ನಗಲಿ ಬಿಡಿ 
ಕರ್ಮದ ಬುತ್ತಿ ಉಣ್ಣುವರು 

ಕಂಡ ಕಂಡವರ ಮುಂದೆ ಆಡಿಕೊಂಡರೇ 
ಆಡಿಕೊಳ್ಳಲಿ ಬಿಟ್ಟು ಬಿಡಿ 
ಉಂಡ ತಟ್ಟೆಗೆ ಉಗುಳುವ ಹೀನ ಜನ 
ಒಳ್ಳೇದೇನು ತಾನೇ ಮಾಡಿಯಾರು 

ಮನದ ಕನಸುಗಳ ಭರವಸೆ ಕಿತ್ತುಕೊಂಡರೆ 
ಕಿತ್ತುಕೊಳ್ಳಲಿ ಮರೆತು ಬಿಡಿ 
ಪರರ ಆಸೆಗಳಿಗೆ ಕೊಳ್ಳಿ ಇಡುವ ಗುಣದವರು
ಪರರ ಏಳಿಗೆ ಸಹಿಸಿಯಾರೆ 

ಸುಮ್ಮನಿದ್ದು ಬಿಡಿ ನಿಮ್ಮ ಪಾಡಿಗೆ ನೀವು 
ಯಾರಿಗೆಷ್ಟು ಸಿಗಬೇಕೆಂದು 
ಭಗವಂತ ಮೊದಲೇ ಬರೆದಿಟ್ಟಿರುವಾಗ 
ಬದಲಾಯಿಸಲು ಅವರ್ಯಾರು 

ಅವರಿವರು ಮಾಡಿದ ಆಡಿದ ಪಾಪ 
ಅವರನ್ನೇ ಒಮ್ಮೆ ದಹಿಸುವುದು
ಮೌನವಾಗಿ ನೀವು ಪ್ರಯತ್ನಶೀಲರಾಗಿರಿ 
ಕನಸೊಮ್ಮೆ ನನಸಾಗುವುದು 

✍️ ಸೂಗಮ್ಮ ಡಿ ಪಾಟೀಲ್ 
      ಉತ್ನಾಳ್ 













ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational