STORYMIRROR

Sugamma Patil

Others

4  

Sugamma Patil

Others

**ಮನೆ**

**ಮನೆ**

1 min
5

**ಮನೆ**

ಅಂದು ಸೋರುವ ಗುಡಿಸಲಲ್ಲಿದ್ದರು 
ಎಲ್ಲರೂ ಕೂಡಿಕೊಂಡು ಬದುಕುತ್ತಿದ್ದೆವು 
ಇಂದು ದೊಡ್ಡ ದೊಡ್ಡ ಬಿಲ್ಡಿಂಗ್ನಲ್ಲಿ
ವಾಸಿಸುತ್ತಿದ್ದೇವೆ ನಿಜಾ ಆದರೆ 
ಒಬ್ಬರ ಮುಖವನ್ನು ಒಬ್ಬರು 
ನೋಡಲು ಸಮಯ ಸಿಗುತ್ತಿಲ್ಲ 

ಅಂದು ಒಂದೊಂದು ಅಗುಳಿಗೂ 
ಬೆಲೆ ಇತ್ತು ಪ್ರಾಮಾಣಿಕ ದುಡಿಮೆ ಇತ್ತು 
ಇಂದು ಮೋಸ ವಂಚನೆಯ ದುಡಿಮೆ 
ಅಪ್ರಾಮಾಣಿಕತೆಯ ನಡೆ ನುಡಿಗಳು 
ಒಟ್ಟಾಗಿ ಕುಳಿತು ಕಷ್ಟ ಸುಖ ಕೇಳುವ 
ಜೊತೆಯಾಗಿ ಉಣ್ಣುವ ಸಂಸ್ಕಾರವಿಲ್ಲ 

ಅಂದು ಕೊಟ್ಟ ಮಗಳು ಹಬ್ಬಕ್ಕೆ ಮನೆಗೆ ಬಂದರೆ
ಸಾಲ ಮಾಡಿ ಮೃಷ್ಟಾನ್ನ ಮಾಡಿ ತಿನ್ನಿಸುತ್ತಿದ್ದರು ಒಡವೆ ವಸ್ತ್ರ ಧನ ಧಾನ್ಯ ನೀಡಿ ಉಡಿ ತುಂಬುತ್ತಿದ್ದರು
ಇಂದು ಮನೆ ಮನಗಳಲ್ಲಿ ನಿರ್ಮಾಣವಾಗಿದೆ ಗೋಡೆ
ಅಕ್ಕ ತಂಗಿ ಎಂಬ ಪ್ರೀತಿ ವಾತ್ಸಲ್ಯ ಬತ್ತಿ ಹೋಗಿದೆ 
ನಾವೆಲ್ಲರೂ ಒಂದೇ ಎಂಬ ಭಾವವಿಲ್ಲ 

ಅಂದು ಹಬ್ಬ ಹರಿದಿನಗಳನ್ನು ಆಚರಿಸಲು 
ಮಾರುಕಟ್ಟೆಯಲ್ಲಿ ಅಗ್ಗದ ವಸ್ತುಗಳಿದ್ದವು 
ಆದರೆ ಖರೀದಿಸಲು ಹಣವಿರುತ್ತಿರಲಿಲ್ಲ 
ಇಂದು ವಿವಿಧ ರೀತಿಯ ದುಬಾರಿ ವಸ್ತುಗಳಿವೆ
ದುಡ್ಡಿಗೆ ಕೊರತೆಯಿಲ್ಲ ಆದರೆ ಖರೀದಿಸಿಕೊಂಡು 
ಎಲ್ಲರೊಟ್ಟಿಗೆ ಸಂಭ್ರಮಿಸುವ ಮನಸ್ಸಿಲ್ಲ 

✍️ ಸೂಗಮ್ಮ ಡಿ ಪಾಟೀಲ್ 
      ಉತ್ನಾಳ್ 







ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ