ಅಂತರಾತ್ಮ
ಅಂತರಾತ್ಮ
ಅಂತರಾತ್ಮ ಹಲವು ಸಾರಿ ಹೇಳುತೈತಿ
ಕೆಟ್ಟನುಡಿ ಕೇಳಿದ್ರ ಬಾಳು ಹಾಳಾಗತೈತಿ
ಕೆಟ್ಟವರ ಸಂಗ ತರತೈತಿ ನೆಮ್ಮದಿಗೆ ಭಂಗ
ಮನಃಸಾಕ್ಷಿಗಂಜಿ ನಡೆದ್ರ ಬದುಕು ಜೇನಂಗ
ಚಾಡಿಕೋರ ಮಂದಿ ಜಗದಲ್ಲಿ ತುಂಬ್ಯಾರ
ಕಣ್ಣಾರೆ ಕಂಡರು ಹುಸಿಯ ನುಡಿಯುತಾರ
ಕಣ್ಣಿದ್ದು ಕುರುಡರಾಗಿ ಮೋಸ ಹೋಗುತಾರ
ಕೆಟ್ಟದ್ದು ನೋಡಿ ದುಷ್ಟತನವನ್ನು ಕಲಿತಾರ
ಅನ್ಯರ ನಿಂದನೆಯು ನಮಗ್ಯಾಕ್ರಿ ಅಂತಾರ
ದಿನಪೂರ್ತಿ ಕುಂತು ಮಂದಿಯ ತೆಗಳುತಾರ
ಸತ್ಯ ಧರ್ಮ ನ್ಯಾಯದಿ ನಡಿಬೇಕಂತ ಹೇಳ್ತಾರ
ಅಧರ್ಮದ ಹಾದಿಯಲ್ಲಿ ಕಾಲವನ್ನು ಕಳಿತಾರ