STORYMIRROR

Ranjitha M

Classics Inspirational Others

4  

Ranjitha M

Classics Inspirational Others

ಪ್ರೀತಿಯೆಂಬ ಮೋಹ

ಪ್ರೀತಿಯೆಂಬ ಮೋಹ

1 min
374

ಪ್ರೀತಿಯು ಅರೆಕ್ಷಣದ ಆಕರ್ಷಣೆಯೇ....??

ಅಥವಾ ಜೀವನವಿಡೀ ಅಗಲದ ಬಂಧವೇ...??

ಪ್ರೀತಿ ಎಂದರೇನು ಅದಕ್ಕಿರುವ ಅರ್ಥವೇನು...??? 

 ಉತ್ತರವೇ ಹೊಳೆಯುತ್ತಿಲ್ಲ ಬರಿ ಪ್ರಶ್ನೆಗಳೆ?????


ಕೆಂಪು ಗುಲಾಬಿಯೆ ಏತಕೆ ಪ್ರೀತಿಯ ಸಂಕೇತ??

ಕೆಂಪನೆ ರುಧಿರವು ಪ್ರೇಮದ ಬಣ್ಣವಲ್ಲವೇ...??

ಕೆಂಪಾದ ಮೆಹಂದಿಯು ಪ್ರೀತಿಯ ಪ್ರತೀಕವೇ...??

ಉತ್ತರವೇ ತೋಚದಾಗಿದೆ ಬರಿ ಪ್ರಶ್ನೆಗಳೇ????


ಪ್ರೀತಿ ಪ್ರೇಮ ಹವ್ಯಾಸವಲ್ಲ, ಮತ್ತೇನು...??

ಪ್ರೀತಿ ಬರಿ ಅಭ್ಯಾಸವಲ್ಲ, ಇನ್ನೇನು....??

ಪ್ರೀತಿ ಎಂಬುದು ಮನದಲಿರುವುದೇ...??

ಉತ್ತರವೇ ಸಿಗುತ್ತಿಲ್ಲ ಬರಿ ಪ್ರಶ್ನೆಗಳೇ????


ಲೆಕ್ಕಾಚಾರದ ಪ್ರೀತಿಗೆ ಆಯಸ್ಸು ಇದೆಯೇ...??

ಒತ್ತಾಯದ ಪ್ರೀತಿ ಎಷ್ಟು ದಿನ ಬದುಕುವುದು...??

ಪ್ರೀತಿಯೆಂಬ ಭಾವನೆ ಮಾಯವಾಗುವುದೇ...??

ಉತ್ತರವೇ ತಿಳಿಯುತ್ತಿಲ್ಲ ಬರಿ ಪ್ರಶ್ನೆಗಳೇ...????


ಪ್ರೀತಿ ಮನುಷ್ಯ ಬದಲಾದಾಗ ಬದಲಾಗುವುದೇ...???

ಪ್ರೀತಿ ಸತ್ತಾಗ ಮನುಜ ಹೇಗೆ ಬದುಕುವ...??

ಪ್ರೀತಿಯ ಹೆಸರಲಿ ಇಟ್ಟ ನಂಬಿಕೆಗೆ ದ್ರೋಹವೇಕೆ...??

ಉತ್ತರವೇ ಇಲ್ಲ ಬರಿ ಪ್ರಶ್ನೆಗಳಿಂದ ತುಂಬಿದೆಯೇಕೀ ಜಗ...???



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics