ಅಮ್ಮನ ಲಂಚ
ಅಮ್ಮನ ಲಂಚ
ಪುಟ್ಟನನ್ನ ಹದ್ದು ಬಸ್ತಿನಲ್ಲಿ ಇಡೋಕೆ ಪ್ರತಿ ದಿನವೂ ಅಮ್ಮ ಕೊಡಲೇಬೇಕಂತೆ ಸಿಹಿಯಾದ ಲಂಚ..!
ಕೊಡುವುದು, ತೆಗೆದುಕೊಳ್ಳುವುದು ತಪ್ಪು ಎಂದು ಗೊತ್ತಿದ್ದರೂ ಮತ್ತದೇ ಪುನರಾವರ್ತನೆ ಆಗುತ್ತಿದೆಯಲ್ಲ..!
ಪುಟ್ಟನ ತರಲೆ ತುಂಟಾಟವನ್ನ ಹತೋಟಿಯಲ್ಲಿ ಇಡಲು, ಅಮ್ಮ ಆಗಾಗ ಕೊಡಬೇಕಂತೆ ಕೇಕು, ಚಾಕಲೇಟು, ಬ್ರೆಡ್ಡು, ಬನ್ನುಗಳನ್ನ...!
ಈಗೀಗ ಪುಟ್ಟ ಕೇಳುತ್ತಾನೆ ಓದು ಬರವಣಿಗೆ ಮಾಡುವುದಕ್ಕೂ ಕುರುಕಲು ಲಂಚವನ್ನ...!
ಸಾಕಾಗಿ ಹೋದ ಅಮ್ಮ ಅಂದುಕೊಳ್ಳುತ್ತಾಳೆ,
"ಈ ಪುಟ್ಟನಿಗೆ ಯಾಕಾದರೂ ಮಾಡಿಸಿದೆ ಇಂಥ ಅಭ್ಯಾಸವನ್ನ..!"
ಇತ್ತೀಚಿಗೇಕೋ ಪುಟ್ಟ ಕೇಳುತ್ತಾನೆ ಮತ್ತೊಂದು ಲಂಚವನ್ನ
ಮಲಗಿ ನಿದ್ರಿಸಬೇಕೆಂದರೆ, "ಕೊಡಲೇಬೇಕಂತೆ ಅರ್ಧ ಗಂಟೆ ಮೊಬೈಲ್ ಫೋನನ್ನ...!"
ಸಿಟ್ಟಾದ ಅಮ್ಮ ಕಂಡುಕೊಂಡಳು ಉಪಾಯವೊಂದನ್ನ,
ಮೆಲ್ಲಗೆ ಹಾಕಿಟ್ಟಳು ಮೊಬೈಲಿಗೆ ಪಾಸ್ವರ್ಡ್ ಒಂದನ್ನ...!
ಜೊತೆಗೆ ಬೀರುವಿಗೆ ಸಾಗಿಸಿದಳು ತಿಂಡಿಯ ಡಬ್ಬಿಗಳನ್ನ...!
ಇದ್ಯಾವುದರ ಬಗ್ಗೆಯೂ ಗೊತ್ತಿಲ್ಲದ ಪುಟ್ಟ,
ಮತ್ತೆ ಶುರುಮಾಡಿದ ಹಳೆಯ ವರಸೆಯನ್ನ..!
ಕೇಳಿದ ಸಿಹಿ ಲಂಚಕ್ಕೆ ಮತ್ತು ಮೊಬೈಲಿಗೆ, ಅಮ್ಮ ಜಗ್ಗದೇ ಕೊಡದಿದ್ದಾಗ, ಅಂತೂ ಹಿಡಿದ ಒಳ್ಳೆಯ ದಾರಿಯನ್ನ...!
ಅನಿಸಿಕೊಂಡ ಮತ್ತೆ ಎಲ್ಲರಿಂದ ನಮ್ಮ ಪುಟ್ಟ ತುಂಟನಾದರೂ ಬಲು ಜಾಣನಲ್ಲವಾ...!
