STORYMIRROR

Achala B.Henly

Children Stories Comedy Children

4  

Achala B.Henly

Children Stories Comedy Children

ಅಪ್ಪನ ನಟನೆ

ಅಪ್ಪನ ನಟನೆ

1 min
234


ಪುಟ್ಟನ ಅಪ್ಪ ದಿನವೂ ಮಾಡುತ್ತಲೇ

ಇರಬೇಕು ಬಗೆಬಗೆಯ ನಟನೆ

ಇಲ್ಲದಿದ್ದರೆ ಪುಟ್ಟನನ್ನು ಸಮಾಧಾನಿಸುವುದು

ಬಲು ಕಷ್ಟದ ವಿಷಯವೇ

ಎಷ್ಟೇ ಆದರೂ ಪುಟ್ಟ ಅವರಪ್ಪನ ಮಗನಲ್ಲವೇ..?

ಹಾಗಾಗಿಯೇ ಚೇಷ್ಟೆ ತರಲೆಗಳು ಬಲು ಜೋರೆ..!


ಪುಟ್ಟನ ಮುಂದೆ ಅಪ್ಪ ಹೊರಗಡೆ ಹೋಗಬೇಕೆಂದರೆ ಮಾಡಬೇಕು

ಸರಿಯಾದ ಯೋಜನೆ

ಇಲ್ಲದಿದ್ದರೆ ಪುಟ್ಟ ಸೂರು ಹಾರಿಹೋಗುವಂತೆ

ಕಿರುಚಿ, ಎಲ್ಲರನ್ನೂ ಭಯ ಬೀಳಿಸುತ್ತಾನೆ..!


ಪುಟ್ಟನ ಆಟಕ್ಕೆ ಕಡಿವಾಣ ಹಾಕಲು

ಅಪ್ಪ ನಟಿಸಬೇಕು ನಿದ್ದೆ ಬಂದಂತೆ

ಇಲ್ಲದಿದ್ದರೆ ರಾತ್ರಿ ಕಳೆದು, ಬಾನಲ್ಲಿ ರವಿ ಮೂಡಿದರೂ ಪುಟ್ಟನ ಆಟಕ್ಕೆ ವಿರಾಮವೇ

ಬೀಳುವುದಿಲ್ಲವಂತೆ..!


ಎಷ್ಟೇ ಕಾಡಿಸಿ ಪೀಡಿಸಿದರೂ, ಆಡುವ ಸಮಯದಲ್ಲಿ ಆಟ, ಓದುವ ಸಮಯದಲ್ಲಿ ಓದು ಎನ್ನುವ

ಪುಟ್ಟನೆಂದರೆ ಅವರಪ್ಪನಿಗೆ ಬಲು ಪ್ರೀತಿಯಂತೆ

ಅದಕ್ಕೇ ಅಲ್ಲವೇ ಹೇಳಿದ್ದು, ನಮ್ಮ ಪುಟ್ಟ ತುಂಟನಾದರೂ ಬಲು ಜಾಣನೇ..!

      


Rate this content
Log in