ಪುಟ್ಟಿಯ ಫಜೀತಿ
ಪುಟ್ಟಿಯ ಫಜೀತಿ
1 min
366
ಅಮ್ಮ ಕಟ್ಟೇ ಎರಡು ಜಡೆಯನ್ನ
ಬೇಗ ಶಾಲೆಗೆ ಹೋಗಬೇಕಲ್ವಾ..?
ಕಟ್ಟದೇ ಹಾಗೇ ಬಿಟ್ಟರೆ ಜುಟ್ಟುಗಳನ್ನ
ತಿನ್ನಬೇಕು ಬೈಗುಳ ಮೇಡಂನಿಂದ..!
ಇಟ್ಟಿದ್ದೀನಿ ನೋಡು ಅಲ್ಲೇ ಎರಡು
ಕಪ್ಪು ಟೇಪು, ಕ್ಲಿಪ್ಪುಗಳನ್ನ
ಮರೆತು ಹಾಗೇ ಕಳಿಸಿದರೆ, ತಿನ್ನಬೇಕು
ನಾನು ಏಟುಗಳನ್ನ..!
ಇನ್ನು ಆಗಲಿಲ್ಲವೇ ನಿನ್ನ ಜಡೆ ಪುರಾಣ..?
ಹಾಕಬೇಕಿನ್ನು ನಾನು ಸಮವಸ್ತ್ರ, ಶೂಸುಗಳನ್ನ..!
ಅಯ್ಯೋ ಏಕೆ, ಮರೆತೇಬಿಟ್ಟೆ ನಾನು
ಇಂದು ಭಾನುವಾರ ರಜಾ ದಿನವಂತಾ..!
ನನಗೆ ಗೊತ್ತು ಎಂದಿನಂತೆ ಬೇಗ ಏಳಲಿ,
ಎಂದು ನೀನೇ ಮಾಡಿದ ನಾಟಕವಲ್ಲವಾ..?!
