ಏಳೇಳು ಜನ್ಮದ ನಂಟು
ಏಳೇಳು ಜನ್ಮದ ನಂಟು
ಹೇಳುತ್ತಾರೆ ಪತಿ ಪತ್ನಿಗೆ,
ಕಟ್ಟಿದ ಮೂರು ಗಂಟು ಏಳೇಳು ಜನ್ಮದ ನಂಟೆಂದು
ಆದರೆ, ಒಂದೇ ಜನ್ಮಕ್ಕೆ ಸಾಕು ಸಾಕೆನಿಸುವಷ್ಟು
ಜಗಳ- ಕುಸ್ತಿ- ಕದನ ಅವರ ಜೀವನದಲ್ಲಿ
ಜರಗುತ್ತದೆ ಹೇಳಿ ಏನ್ಮಾಡೋದು...?
ಇರುವ ಒಂದು ಜನ್ಮವನ್ನೇ ಪೂರೈಸಲು ಕಷ್ಟವಿರುವಾಗ,
ಅನಿಸುತ್ತದೆ ಮತ್ತೆ ಇನ್ನೊಂದು ಜನ್ಮ ಬೇಕಾ ಎಂದು...?
ಹೇಳುತ್ತಾರಲ್ಲ ಮಾಡಿದ ಕರ್ಮ ಮುಂದಿನ ಜನ್ಮಕ್ಕೆ ಹೋಯಿತು ಅಂತ,
ಮತ್ತೇ ಮನುಷ್ಯನಾಗಿ ಹುಟ್ಟಿದರೆ ಏನಪ್ಪಾ ಮಾಡೋದು...!
ಒಂದಂತೂ ಖಚಿತ, ಅಕಸ್ಮಾತ್ ಮತ್ತೇ ಮುಂದಿನ ಜನ್ಮದಲ್ಲಿ ಹುಟ್ಟಿ,
ಸಂಸಾರಸ್ಥನಾಗಬೇಕು ಎಂದಿದ್ದರೆ ಪ್ರಾಣಿ ಪಕ್ಷಿಗಳಾಗಿ ಹುಟ್ಟುವುದೇ ಲೇಸೆಂದು...?
ಮೂಕ ಪ್ರಾಣಿಗಳಾದ ಅವು, ಮಾತಿಲ್ಲ ಕಥೆಯಿಲ್ಲ
ಇನ್ನೂ ಜಗಳದ ಮಾತಂತೂ ಇಲ್ಲವೇ ಇಲ್ಲವೆಂದು...!
ಇದ್ದರೂ ಗಂಡು- ಹೆಣ್ಣು ಎಂಬ ಭೇದ ಮರೆತು
ಒಂದೆರಡು ಹೊಡೆತ, ಒದೆತ, ಕುಸ್ತಿಯಿರಬಹುದೆಂದು..!
ಅಡುಗೆ ಕೆಲಸ, ಆಫೀಸು, ಸಂಬಳ, ಮನೆ, ಮಠ
ಇವುಗಳ ಒತ್ತಡ ತೊಂದರೆ ಅವುಗಳಿಗೆ ಇಲ್ಲವೆಂದು
ಹೊತ್ತು ಹೊತ್ತಿನ ಊಟ ಮತ್ತು ಮರಿಗಳ
ಪಾಲನೆ ಪೋಷಣೆಯ ಚಿಂತೆಯಷ್ಟೇ ಸರಿಯಲ್ಲವೇನು..?
"ಹಾಗಾಗಿ ಈ ಜನ್ಮದಲ್ಲಿ ಪಾಪಕ್ಕಿಂತ ಪುಣ್ಯದ ಕೆಲಸ ಜಾಸ್ತಿ ಮಾಡಿದರೆ,
ಮುಂದಿನ ಜನ್ಮದಲ್ಲಾದರೂ ಚೆಂತೆರಹಿತ, ಕದನರಹಿತ ನೆಮ್ಮದಿಯ ಜೀವನ ಖಾತ್ರಿ ಎನಿಸುತ್ತದೆ..!"
ಹೇಳಿ, ನನ್ನ ಮಾತು ದಿಟವಲ್ಲವೇನು...?
