ಪುಟ್ಟನ ಆಲೋಚನೆ
ಪುಟ್ಟನ ಆಲೋಚನೆ
ಪುಟ್ಟ ಕಂದ ಗೀರಿದ ಗೋಡೆಯ
ಮೇಲೊಂದು ಉದ್ದವಾದ ಗೆರೆ
ಅಮ್ಮ ಬಂದೇಟಿಗೆ ಜಾಗ ಕಿತ್ತ ಮೆಲ್ಲನೇ...!
ಬಂದು ನೋಡಲು ಅಮ್ಮ ಕಂದನ ರಚನೆ
ಕಲ್ಲಂತೆ ನಿಂತುಬಿಟ್ಟಳು ಹಾಗೇ ಸುಮ್ಮನೆ...!
ಸಿಟ್ಟಾದ ಅಮ್ಮ ಕರೆದಳು "ಚಿನ್ನಾ ಬಾ ಬೇಗನೇ"
ಖುಷಿಯಾದ ಕಂದ ಓಡೋಡಿ ಬಂದು ಕೇಳಿದ, "ಅಮ್ಮ ಏಕೆ ನನ್ನನ್ನು ಕರೆದೆ..?"
ಕಂದನ ಜುಟ್ಟು ತನ್ನ ಕೈಗೆ ಸಿಕ್ಕಿದ ಖುಷಿಯಲ್ಲಿ ಹೇಳಿದಳಾಕೆ, "ತಡೆಯೋ ಪುಟ್ಟ ಇಗೋ ಬಂದೆ..!"
ಬದಲಾದ ಹೆಸರಿನಲ್ಲೇ ಗುರುತಿಸಿಬಿಟ್ಟ
ಪುಟ್ಟ, ಅಮ್ಮನ ಭಾವನೆ...?
ಅದಕ್ಕೇ ಅಲ್ಲವೇ ಹೇಳುವುದು ನಮ್ಮ ಪುಟ್ಟ ತುಂಟನಾದರೂ ಬಲು ಜಾಣನೇ...!
ಹೇಗಾದರೂ ಸರಿಯೇ, ಅಮ್ಮನ ಏಟಿನಿಂದ ತಪ್ಪಿಸಿಕೊಳ್ಳಬೇಕಿರುವುದು ಈಗಿರುವ
ಪುಟ್ಟನ ಯೋಜನೆ...?
ಅಮ್ಮನಿಗೆ ಎತ್ತಿಕೊಳ್ಳಲು ಹೇಳಿ,
ಅವಳನ್ನು ಮುದ್ದುಗರೆಯುವುದೊಂದೇ
ಅವನಿಗೆ ಬಂದ ಸುಂದರವಾದ ಆಲೋಚನೆ..!