ಜೀವನ ಶೈಲಿ
ಜೀವನ ಶೈಲಿ
ಒಬ್ಬೊಬ್ಬರದು ಒಂದೊಂದು ಜೀವನ ಶೈಲಿ
ಇವರದೇಕೆ ಹೀಗೆ, ಅವರದೇಕೆ ಹಾಗೆ ಎಂದು ಯೋಚಿಸುತ್ತಾ ಹೋದರೆ
ತಲೆ ನೋವು ಗ್ಯಾರಂಟಿ..!!
ಹಿಂದೊಮ್ಮೆ ಆಧುನಿಕ ಕಾಲದವರನ್ನು ಬೆಕ್ಕಸ ಬೆರಗಾಗಿ ನೋಡುತ್ತಿದ್ದವರು,
ಈಗ ಅವರೇ ಆ ಶೈಲಿಗೆ ಮರುಳಾಗಿದ್ದಾರೆ ಕಣ್ರೀ...
ಸೀರೆ ರವಿಕೆ ಎಂದರೆ ಮಾರು ದೂರ ಓಡಿ ಹೋಗುತ್ತಿದ್ದ ಪಕ್ಕದ ಮನೆ ಹುಡುಗಿ,
ಈಗ ಆಗಿದ್ದಾಳೆ ಪರಿಪೂರ್ಣ ಭಾರತದ ನಾರಿ..!!
ಮೊಬೈಲ್ ಹಿಡಿಯಲು ಬರದಿದ್ದ ಅಜ್ಜ ಅಜ್ಜಿಯರು ಈಗ ದಿನಪೂರ್ತಿ ಅದರಲ್ಲೇ ಬ್ಯುಸಿ..!!
ಆಂಟಿ ಅಂಕಲ್ಲರು ಸಹ ಟ್ರಿಪ್ಪಿಗಿ ಹೋಗಿ ತೆಗೆಯುತ್ತಲೇ ಇರುತ್ತಾರೆ ನಿಮಿಷಕ್ಕೊಂದು ಸೆಲ್ಫೀ
ಇವೆಲ್ಲವನ್ನೂ ಗಮನಿಸುತ್ತಾ ಚಿಂತಿಸಲು ಶುರುವಿತ್ತರೆ
ಆಗುವುದು ನಮ್ಮ ತಲೆ ಬಿಸಿ....
ಅದರ ಬದಲು, ಇರುವುದನ್ನ ಒಪ್ಪಿಕೊಂಡು,
ಸದಾ ಹೇಳುತ್ತಾ ಇರಿ....
"ಬದಲಾವಣೆ ಜಗದ ನಿಯಮ",
ಹಾಗಾಗಿ ಪ್ಲೀಸ್ ಡೊಂಟ್ ವರ್ರಿ...!!
