ಮೊಬೈಲ್
ಮೊಬೈಲ್
ಎಷ್ಟು ಹುಡುಕಿದರೂ
ಸಿಗಲಾರದೇನೋ
ಆ ಹೊತ್ತಗೆ
ಈ ಹೊತ್ತಿಗೆ l
ಕಾರಣ ಗೊತ್ತಲ್ಲ
ಎದ್ದು ನಡೆದು
ಹುಡುಕಲಾರದಷ್ಟು
ಕೃಶರಾಗಿದ್ದೇವೆ..ll
ಕಾರಣ
ಕೈಯಲ್ಲೇ
ಮೊಬೈಲ್ ಇದೆ..ll
ಲೋಕೇಷ್ ಸಚ್೯
ಗೇಮ್ಸ್ ..ಜೊತೆಗೆ
ಓದಲಾರದೆ ಸುಮ್ಮಗೆ
ನೋಡುವ ಹೊತ್ತಗೆಗಳೂ
ಅಲ್ಲಿದ್ದವು..
ಇನ್ನು ಓಡುವುದಿರಲಿ
ನಡೆಯುವುದೆಂತು?
ಕುಳಿತ್ತಲ್ಲೇ ಜಗತ್ತು..
ಕುಳಿತಲ್ಲೇ ಲೋಕಾಭಿರಾಮ
ಕುಳಿತಲ್ಲೇ ಜಾಬು
ಕುಳಿತಲ್ಲೇ ಸಾವು..ll