ಅಭ್ಯಾಜನ
ಅಭ್ಯಾಜನ


ಪೀಠಿಕೆ
ಮನೇಲಿ ಏನಾದ್ರು ಯಾವಾಗ್ಲಾದ್ರು ಎಣ್ಣೆ ಚಲ್ಲಿದರೆ ಏನಾದ್ರು ಹಿಟ್ಟು ( ಗೋದಿ, ಅಕ್ಕಿ ಹಿಟ್ಟು ) ಹಾಕಿ ವರೆಸಿದರೆ ಎಣ್ಣೆ ಹೋಗುತ್ತೆ ಅಂತ ಹೇಳುತ್ತಾರೆ
----------------_---------
ಬಾಡಿ ತುಂಬಾ ಹೀಟ್ ಆಗಿ ಕಣ್ಣುಗಳು ಉರೀತಿತ್ತು ಅಂತ ಸ್ವಲ್ಪ ಜಾಸ್ತಿನೇ ಹರಳೆಣ್ಣೆ ನೆತ್ತಿಗೆ ಹಚ್ಚಿದ್ದೆ
ಶವರ್ ತೊಗೊಂಡ ಮೇಲು ಕೂದಲಲ್ಲಿ ಎಣ್ಣೆ ಹೋಗಿರಲಿಲ್ಲ
ಅದನ್ನೇ ನಮ್ಮ ಕೆಲಸದ ಹುಡುಗಿಗೆ ಹೇಳಿದೆ
ಅವಳು ಸಡನ್ನಾಗಿ " ಅಲ್ಲಾ ಅಕ್ಕ ಗೂದಿ ಹಿಟ್ಟೋ ಅಕ್ಕಿ ಹಿಟ್ಟೋ ಹಾಕಿ ಉಜ್ಜುದಲ್ವಾ " ಅಂದಳು
ನಾನು, ಹಾ ಇದೇನೇ ಹಿಟ್ಟಲ್ಲಿ ಯಾರಾದ್ರೂ ತಲೆ
ತೊಳಿತಾರ ಅಂದೆ?
ಅವಳು ಹುಮ್ಮ್ ಮತ್ತೆ ನೆಲದಲ್ಲಿ ಎಣ್ಣೆ ಚಲ್ಲಿದಾಗ ನೀವೇ ಅಲ್ವಾ ಹಿಟ್ಟು ಹಾಕು ಎಣ್ಣೆ ಹೋಗುತ್ತೆ ಅಂದಿದ್ದು ಅಂದಳು
ಅವಳ ಬುದ್ದಿ ವಂತಿಕೆಗೆ ಏನು ಹೇಳೋದೋ ತಿಳಿಲಿಲ್ಲ.
ಅವಳು ಹೇಳಿದ ಹಾಗೆ ಮಾಡಬಹುದಾ ಹಿ ಹಿ