ನನ್ ಮೊದ್ಲ ಕವ್ನ
ನನ್ ಮೊದ್ಲ ಕವ್ನ
ಒಂದ್ ಪೇಪರ್ಗೆ
ಬೇಡಪ್ಪಾಂದ್ರು
ಕಳಿಸ್ಬಿಟ್ಟ ನಮ್ಹುಡ್ಗ
ನಾನ್ ಗೀಚಿದ್ಕವ್ನ
ಬೇಡಾಂತಿದ್ರು ಹೊರ್ಗೆ
ಒಳ್ಮನ್ಸು ಮಾತ್ರ
ಕಳ್ಸಂತಿತ್ತು ಒಳ್ಗೊಳ್ಗೆ
ಪಬ್ಲೀಶು ಆಗ್ಲಿಲ್ಲ
ವಾಪ್ಸು ಬರ್ಲಿಲ್ಲ
ಎಳ್ಳು ನೀರ್ಬಿಟ್ಟಾಯ್ತು
ಬೀದಿ ಬದಿಲ್ಬೋಣ್ಡ
ತಿಂದು ಕೈ ವರ್ಸಕ್ಕೊಟ್
ಪೇಪರ್ ನಲ್ಲಿತ್ತು
ನನ್ ಎಣ್ಣೆ ಕುಡಿದ್ಕವನ