ನಲ್ಲನ ವೇದನೆ
ನಲ್ಲನ ವೇದನೆ
ನಲ್ಲೆ, ಒಮ್ಮೆ ಇತ್ತ ದೃಷ್ಟಿ ಹರಿಸಿ ನನ್ನ ನೋಡುವಂತವಳಾಗು ಪ್ರಿಯೆ..!!
ದಿನವಿಡೀ ಗದ್ದೆ- ತೋಟ,
ನಾಟಿ- ಬಿತ್ತನೆ, ದನ-ಕರು,
ಕುರಿ-ಕೋಳಿ ಎಂದುಲಿಯುತ್ತಾ
ನನ್ನೇಕೆ ಬಡಪಾಯಿ ಮಾಡುವೆ..?!
ಒಂದರೆಕ್ಷಣ ನನ್ನೆಡೆಗೆ ನಿನ್ನ ಕಣ್ಣು ಹೊರಳಿಸಬಾರದೇ..?
ನಿನ್ನೊಂದು ನೋಟಕ್ಕಾಗಿ ಕಾಯುತ್ತಿರುವ
ಈ ಪಾಪದ ಗಂಡು ಜೀವಕ್ಕೆ
ಖುಷಿಯ ತಂಪು ತಾರಬಾರದೇ..!!