ಸೂರ್ಯನೇಕೆ ನಿಗಿನಿಗಿ
ಸೂರ್ಯನೇಕೆ ನಿಗಿನಿಗಿ
ಸೂರ್ಯನೇಕೆ ನಿಗಿ ನಿಗಿ ಎನ್ನುತ್ತಾನೆ ಗೊತ್ತಾ?
ಕೇಳಿದಳು ತನ್ನ ಹುಡುಗನಿಗೆ
ಅವನ ಕೆಲಸವೇ ಗುರ್ರೆನ್ನುವುದಲ್ಲವೇ
ಅವನೆಂದ ತನ್ನ ಹುಡುಗಿಗೆ.
ತಕ್ಷಣ ನಕ್ಕಳಾಕೆ
ಈ ವಯ್ಯ ನಿಂತ್ಕೊಂಬುಟ್ಟ ಸುಮ್ಕೆ
ನಿನಗೆ ನಾನು ಸಿಕ್ಕಿರುವುದನ್ನು ಕಂಡು
ಹೊಟ್ಟೆ ಉರಿಗೆ ಹಿಗಾಡುತ್ತಾನೆ ಸೂರ್ಯ
ಮತ್ತೇ ನಕ್ಕಳಾಕೆ ಮೆಲ್ಲಗೆ
ಹಣೆ ಚಚ್ಚಿಕೊಂಡರೂ, ಮನಸೋತ ಇವಳ ನಗುವಿಗೆ
