ಹೆತ್ತವರ ಬೆಲೆ
ಹೆತ್ತವರ ಬೆಲೆ
1 min
165
ಹೆತ್ತವರ ಮಾತನ್ನು
ಸ್ವಲ್ಪವಾದರೂ ಕೇಳುವುದು ಒಳಿತು
ಅವರೇನು ನಮ್ಮ ವಿರೋಧಿಗಳಲ್ಲ
ನಮ್ಮ ಶತ್ರುಗಳಂತೂ ಅಲ್ಲವೇ ಅಲ್ಲ
ನಮ್ಮ ಒಳಿತು ಕೆಡುಕು
ಅವರಿಗಲ್ಲದೇ ಬೇರಾರಿಗೆ ತಿಳಿದೀತು
ಹರೆಯಕ್ಕೆ ಕಾಲಿಟ್ಟು
ಇನ್ಯಾರಿಗೋ ಮನಸೋತು
ಅವರೊಡನೆ ಮನೆಬಿಟ್ಟು
ಪ್ರಪಂಚಕ್ಕೆ ತಿಳಿಯದಂತೆಯೇ ಕೈಲಾಸ ಸೇರಿದ ಮೇಲೆ
ಹೆತ್ತವರ ಬೆಲೆ ತಿಳಿಯಬೇಕೇ?
ಸಮಯ ಮತ್ತೆ ಮರಳಿ ಬಂದೀತೇ?

