ಕನಸ್ಸಿನ ಮೆರೆವಣಿಗೆ
ಕನಸ್ಸಿನ ಮೆರೆವಣಿಗೆ
ತುಸು ನಿದ್ದೆಯಿಂದ ಜಾರಿದೆ ಕನಸ್ಸಿನ ಬಲೆಗೆ,
ಮೈಮನ ಸಾಗುತಿದೆ ವಿಸ್ಮಯ ಲೋಕದೆಡೆಗೆ,
ಅದ್ದೂರಿಯಾಗಿ ಸ್ವಾಗತಿಸುತಿದೆ ಕನಸ್ಸಿನ ಮೆರೆವಣಿಗೆ,
ನನಗಾಗಿ ನೀಡುತಿದೆ ಮನರಂಜನೆಯ ಕೊಡುಗೆ!!
ಕನಸ್ಸಿನ ಸಾರಥ್ಯದಲ್ಲಿ ಈ ಪಯಣ,
ಮೂಡಿ ಬರುತಿದೆ ಅಂದದ ಚಿತ್ರಣ,
ಹಲುವು ಪಾತ್ರಧಾರಿಗಳು ಮೆರೆವ ತಾಣ,
ಕನಸ್ಸಿನ ಮೆರೆವಣಿಗೆಯಲಿ ಕಥೆಗಳ ಅನಾವರಣ!!
ತನ್ನ ವೈವಿಧ್ಯಮಯ ಕಥೆಗಳ ಸುತ್ತ,
ವಿಭಿನ್ನ ಕಲ್ಪನೆಗಳನು ಉಣಬಡಿಸುತ,
ಈ ಅಮೋಘ ಲೋಕಕ್ಕೆ ಹೃದಯದಿ ಮನಸೆಳೆತ,
ಈ ಸುಂದರ ಚಿತ್ರಣ ಉಳಿಯಲಿದೆ ಶಾಶ್ವತ!!
ಎಲ್ಲೆ ಇಲ್ಲದ ಮನರಂಜನೆಯ ವೇದಿಕೆ,
ನೋವು, ನಲಿವು, ಹಲವು ಭಾವನೆಗಳ ಸಂಚಿಕೆ,
ಮನದಲಿ ಕನಸ್ಸಿನ ಮೆರವಣಿಗೆಯ ಆಳ್ವಿಕೆ,
ತೆರಿಗೆಯಿಲ್ಲದೆ ಅನನ್ಯವಾಗಿ ರಂಜಿಸುತಿದೆ ಮನಕೆ!!