ಶಿಶಿರ ಚಳಿಯಲಿ*****
ಶಿಶಿರ ಚಳಿಯಲಿ*****
ಹಸಿರ ತಪ್ಪಲಲಿ ಕುಳಿತು ನಿನ್ನದೇ
ಧ್ಯಾನದಲ್ಲಿರುವೆ ಕಣೋ ಹುಡುಗಾ..
ಮೊಸರುಗಡಿಗೆಯಾಗಿದೆ ಮನಸೇಕೋ
ನೆನಪುಗಳ ಹುಳಿಗೆ ಸಿಲುಕಿ ಹೆಪ್ಪಿಟ್ಟಿದೆ.
ಉಸಿರನೊಮ್ಮೆ ಬಿಸಿಯಾಗಿಸಿಬಿಡು
ಕೊಸರಿ ಜಾರಲಿ ಕುಸುರಿಕನಸುಗಳು
ಗಲ್ಲದೊಳಗಣ ಬಣ್ಣ ನಲ್ಲ ನಿನಗಾಗೇ
ಪಲ್ಲವಿಸಿದನುರಾಗಕೆ ಮನಸು ಮಾಗೆ
ಎಲ್ಲೆ ಮೀರದ ಒಲವು ನಮ್ಮದಾಗಿರಲಿ
ಸೊಲ್ಲಡಗಿಸಲು ಸಾಕು ಮೆಲ್ಲುಸಿರಲಿ
ತುಟಿಯಂಚಜೇನಸವಿಗೆ ಮಡಿಯೇಕೆ
ಕಟಿಯಿಂದ ನವಿರೇಳುವ ಭಾವಸೋಕೆ
ಶಿಶಿರಚಳಿಗೆ ಬಸಿರಾದ ಬಯಕೆಗಳು
ನಿಶೆಯನಶೆಯಲಿ ತುಸು ತಣಿಯಲಿ.

