ಸೌಂದರ್ಯ ಲಹರಿ
ಸೌಂದರ್ಯ ಲಹರಿ
ಚೆಂದುಟಿಯ ಬಿರಿದು ನಾಚಿಹ ನೀರೆ
ನಿನ್ನಂದಕೆ ಸಾಟಿಯದು ಯಾರೆ.?
ಕೆಂಪು ಕದಪಿನ ಚೆಲುವೆ ಮನಸೋರೆ
ಮಾದಕ ಮಾದನಿಕೆ ನೀ ಯಾರೆ.?
ನಾಚಿಕೆಯಾಭರಣ ತೊಟ್ಟ ಸಿರಿ ನವಿಲೆ
ಕಮಲ ಕಂಗಳ ಸಿಂಗಾರಿ ಶಾಕುಂತಲೆ
ಲೋಲಾಡುವ ಜಾಲಿತನದ ಕಿವಿಯೋಲೆ
ಯಾರಿವಳು ವೈಯ್ಯಾರಿ ಕುಸುಮಬಾಲೆ
ಕಪ್ಪುಕೇಶ ಹೊಂಬಣ್ಣ ಮೂಡಿರಲು
ರವಿ ರಶ್ಮಿ ಚುಂಬನದ ಅಮಲು
ಸಂಪಿಗೆಯ ನಾಸಿಕವು ಕಂಪ ಬೀರಿರಲು
ಏರದೆ ಮುಗುಳ್ನಗೆಯ ಘಮಲು
ಕಪ್ಪು ಮೋಡದಂದದಿ ಹುಬ್ಬು
ಮಧ್ಯೆ ಹೊಳೆವ ಸೂರ್ಯನಂತಹ ಬಿಂದಿ
ರಸಿಕ ಲಕುಮಿಕಂದನು ಅಭಿವಂದಿ
ಅವಳೊಳಗೆ ಅವನೂ ಸ್ವಯಂ ಬಂಧಿ

