STORYMIRROR

Someshwar Gurumath

Drama Romance Classics

4  

Someshwar Gurumath

Drama Romance Classics

ನಿನ್ನದೇ ಕಥೆಯ ಹೇಳಿದೆ.

ನಿನ್ನದೇ ಕಥೆಯ ಹೇಳಿದೆ.

1 min
395

ನೆಪವಾದ ನೆನಪಿನ್ಹಂದರ,

ನವಿರಾಗಿ ಕೂಗಿದೆ,

ನಗುತಲೇ ನರಳಿ,

ನಿತ್ಯವೂ ನಿನಗಾಗಿ ಕಾದಿದೆ.


ಮುಡಿಗೇರುವ ಮಲ್ಲಿಗೆ,

ಯಾಚಿಪುದೊಂದು ಕೋರಿಕೆ,

ತರಂಗದೊಳಾದರೂ ಬರಲೇ,

ಮಧುರತೆಯ ಸನಿಹಕೆ?


ನಡೆದ ದಾರಿಯ ಸಾಲುಗಳಲಿ,

ನಿನ್ನದೇ ಹೆಜ್ಜೆ ಗುರುತು,

ಮೌನವಾದ ಅಕ್ಷರಗಳೂ,

ಕೇಳಿವೆ ನಿನ್ನ ಕುರಿತು.


ಬಚ್ಚಿಟ್ಟ ಕನಸುಗಳ ಬೀಗವ,

ತುಟಿಯೇಕೆ ತೆರೆಯಿತು?

ಭಾವಯಾನದ ಲಹರಿಯಂತ್ಯಕೆ,

ನಾಂದಿಯೇಕೆ ಹಾಡಿತು?


ಮರೆತೂ ಮರೆಯದಾದ ಪುಟಗಳ,

ಮನವಿಂದೇಕೆ ಕೆದಕಿದೆ?

ಕಣ್ಣಿಂದ ಜಾರಿದ ಹನಿಯೂ,

ನಿನ್ನದೇ ಕಥೆಯ ಹೇಳಿದೆ.!


Rate this content
Log in

Similar kannada poem from Drama